ಗಂಗಾವತಿ ಕೆಕೆಆರ್‌ಟಿಸಿ ಡಿಪೋ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪದಲ್ಲಿ ಘಟಕ ವ್ಯವಸ್ಥಾಪಕ ಪ್ರವೀಣ ಯರ್ನಾಳ್ ಗುರುವಾರ ಮಾತನಾಡಿದರು. ಸಂಚಾರ ಠಾಣೆ ಪಿಎಸೈ ಡಿ.ಶಾರದಮ್ಮ, ಬಸ್ ನಿಲ್ದಾಣಾಧಿಕಾರಿ ಹಣಮಂತಗೌಡಗೌಡರ್ ಇತರರಿದ್ದರು.
ಗಂಗಾವತಿ: ಸಂಚಾರ ನಿಯಮ ಪಾಲನೆ ಮೂಲಕ ಸಂಭವನೀಯ ಅಪಘಾತ ತಪ್ಪಿಸಬೇಕಿದ್ದು, ಪ್ರಯಾಣಿಕರ ಬಗ್ಗೆ ಕಾಳಜಿವಹಿಸುವಂತೆ ಕೆಕೆಆರ್‌ಟಿಸಿ ಘಟಕ ವ್ಯವಸ್ಥಾಪಕ ಪ್ರವೀಣ ಯರ್ನಾಳ್ ಹೇಳಿದರು.
ನಗರದ ಕೆಕೆಆರ್‌ಟಿಸಿ ಡಿಪೋ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪದಲ್ಲಿ ಮಾತನಾಡಿದರು. ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಚಾಲಕರು ಜಾಗೂರಕತೆಯಿಂದ ವಾಹನ ಚಾಲನೆ ಜತೆಗೆ ಸಂಚಾರ ನಿಯಮಾವಳಿಗಳನ್ನು ಪಾಲಿಸಬೇಕು. ಪ್ರತಿಯೊಬ್ಬರ ಜೀವ ಮುಖ್ಯವಾಗಿದ್ದು ಜಾಗರೂಕತೆಯಿಂದ ವಾಹನ ಚಲಾಯಿಸಿ ಎಂದು ಸಲಹೆ ನೀಡಿದರು.
ಸಂಚಾರ ಠಾಣೆ ಪಿಎಸೈ ಡಿ.ಶಾರದಮ್ಮ ಮಾತನಾಡಿ, ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಕೆ ಸರಿಯಲ್ಲ. ಬಸ್‌ನಲ್ಲಿರುವ ಎಲ್ಲ ಪ್ರಯಾಣಿಕರಿಗೆ ಚಾಲಕರೇ ದೇವರಾಗಿದ್ದು, ಅವರ ಬಗ್ಗೆ ಕಾಳಜಿವಹಿಸುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಚಾಲಕರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಬಸ್ ನಿಲ್ದಾಣಾಧಿಕಾರಿ ಹಣಮಂತಗೌಡ ಗೌಡರ್, ಸಂಚಾರ ನಿರೀಕ್ಷಕ ಶಿವನಗೌಡ, ಸಹಾಯಕ ಸಂಚಾರ ನಿರೀಕ್ಷಕ ಸಂಜೀವಮೂರ್ತಿ, ಲೆಕ್ಕಾಧಿಕಾರಿ ವೆಂಕಟೇಶ ಇತರರಿದ್ದರು.