ಗ್ಯಾರಂಟಿ ಲಾನುಭವಿಗಳ ಪರಿಷ್ಕರಣೆ ಮಾಡಿ

ಕೊಪ್ಪಳದಲ್ಲಿ ಮಂಗಳವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಭೆ ನಡೆಯಿತು. ಅಧ್ಯಕ್ಷ ಬಾಲಚಂದ್ರನ್​ ಎಸ್​., ತಾಪಂ ಇಒ ದುಂಡಪ್ಪ ತುರಾದಿ ಇದ್ದರು.
ಕೊಪ್ಪಳದಲ್ಲಿ ಮಂಗಳವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಭೆ ನಡೆಯಿತು. ಅಧ್ಯಕ್ಷ ಬಾಲಚಂದ್ರನ್​ ಎಸ್​., ತಾಪಂ ಇಒ ದುಂಡಪ್ಪ ತುರಾದಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಬಾಲಚಂದ್ರನ್​ ಎಸ್​.ಸೂಚನೆ
ಕೊಪ್ಪಳ : ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಮರು ಪರಿಶೀಲನೆ ನಡೆಸುತ್ತಿದ್ದು, ಅರ್ಹರಿಗೆ ಯೋಜನೆ ಸಿಗುವಂತೆ ನೋಡಿಕೊಳ್ಳಿ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಾಲಚಂದ್ರನ್​ ಎಸ್​.ಸೂಚಿಸಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಸಿಡಿಪಿಒ ರೋಹಿಣಿ ಮಾತನಾಡಿ, ಗೃಹಲಕ್ಷಿ$್ಮ ಯೋಜನೆಯಡಿ ಏಪ್ರೀಲ್​ವರೆಗೆ ದುಡ್ಡು ಬಿಡುಗಡೆಯಾಗಿದೆ. ಮರು ಅರ್ಜಿ ಸಲ್ಲಿಕೆ ಅಧಿಸೂಚನೆ ಬಂದಿಲ್ಲ. ಕೊಪ್ಪಳ ತಾಲೂಕಿನಲ್ಲಿ 1,900 ಲಾನುಭವಿಗಳು ಮರಣ ಹೊಂದಿದ್ದಾರೆ. ಈ ವಿವರ ಈಗಾಗಲೇ ನೀಡಿದ್ದೇವೆಂದು ವಿವರಿಸಿದರು. ಅಧ್ಯಕ್ಷರು ಮಾತನಾಡಿ, ಪ್ರತಿ ಗ್ರಾಮವಾರು ಲಾನುಭವಿಗಳ ಪರಿಷ್ಕರಣೆ ನಡೆಸಿ. ನಿಧನ ಹೊಂದಿದವರ ವಿವರ ಕಲೆ ಹಾಕಿ ಅಪ್ಡೇಟ್​ ಮಾಡುವಂತೆ ತಿಳಿಸಿದರು.
ಸದಸ್ಯ ಲಕ್ಷ್ಮಣ ಡೊಳ್ಳಿನ್​ ಮಾತನಾಡಿ, ಗಿಣಗೇರಾ ಗ್ರಾಮದಲ್ಲಿ ಜೆಸ್ಕಾಂ ಜಾಗೃತದಳ ಅಧಿಕಾರಿಗಳು ದಾಳಿ ಮಾಡಿ ಮೀಟರ್​ ಇಲ್ಲದವರಿಗೆ ದಂಡ ಹಾಕಿದ್ದಾರೆ. ಆದರೆ, ಮೀಟರ್​ಗೆ ಹಣ ಕಟ್ಟಿದ್ದರೂ ಅಳವಡಿಕೆ ಮಾಡಿಲ್ಲ. ಇದರಿಂದ ಲಾನುಭವಿಗಳಿಗೆ ಅನ್ಯಾಯವಾಗಲಿದೆ ಎಂದು ಗಮನ ಸೆಳೆದರು. ಸದಸ್ಯ ರಮೇಶ್​ ಹ್ಯಾಟಿ ಭಾಗ್ಯನಗರದಲ್ಲಿ ವಿದ್ಯುತ್​ ಕಡಿತವಾಗುತ್ತಿದೆ ಎಂದರು. ಈ ಬಗ್ಗೆ ಪರಿಶೀಲಿಸಿ ಜನರಿಗೆ ತೊಂದರೆ ಆಗದಂತೆ ಕ್ರಮವಹಿಸಿ. ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಆದೇಶ ಬಂದಲ್ಲಿ ಮಾಹಿತಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು.
ಸದಸ್ಯೆ ಜ್ಯೋತಿ ಗೊಂಡಬಾಳ, ಗೃಹ ಬಳಕೆ ಸಿಲಿಂಡರ್​ಗೆ ಪೂರ್ಣ ಹಣ ಪಡೆದರೂ ಬಿಲ್​ ನೀಡುತ್ತಿಲ್ಲವೆಂದರು. ಸದಸ್ಯ ಮೆಹಬೂಬ್​ ಪಾಷಾ, ವಸತಿ ನಿಲಯ, ಶಾಲೆ, ಅಂಗನವಾಡಿ ಕೇಂದ್ರಗಳಿಗೆ ನಿರಂತರ ಸಿಲಿಂಡರ್​ ಪೂರೈಸುವಂತೆ ತಿಳಿಸಿದರು. ಅಧ್ಯಕ್ಷರು ಪ್ರತಿಕ್ರಿಯಿಸಿ, ವಿತರಕರು ಗ್ರಾಹಕರೊಂದಿಗೆ ಸಂಯಮದಿಂದ ವರ್ತಿಸಿ.ಹೆಚ್ಚಿನ ಹಣ ಪಡೆದಲ್ಲಿ ಕ್ರಮವಹಿಸಲಾಗುವುದೆಂದು ಎಚ್ಚರಿಸಿದರು.
ಗಂಗಾವತಿ ವಿಭಾಗದ ಬಸ್​ಗಳು ಗಿಣಗೇರಾ ಬೈಪಾಸ್​ನಿಂದ ಸಂಚರಿಸುವ ಕಾರಣ ಗ್ರಾಮೀಣ ಜನರಿಗೆ ಸಮಸ್ಯೆಯಾಗುತ್ತಿದೆ ಎಂದರು. ಸದಸ್ಯ ಅನ್ವರ್​ ಪಾಷಾ ಅಳವಂಡಿ ಬಸ್​ನಿಲ್ದಾಣದಲ್ಲಿ ನಂದಿನಿ ಮಿಲ್ಕ್​ ಪಾರ್ಲರ್​ ಆರಂಭಿಸುವಂತೆ ಮನವಿ ಮಾಡಿದರು. ಮೆಹಬೂಬ್​ ಪಾಷಾ ಸಭೆಗೆ ಬರುವಾಗ ಅಧಿಕಾರಿಗಳು ಅನುಪಾಲನಾ ವರದಿಯೊಂದಿಗೆ ಬರುವಂತೆ ಮನವಿ ಮಾಡಿದರು. ಈ ಬಗ್ಗೆ ಕ್ರಮವಹಿಸಲು ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ತಾಪಂ ಇಒ ದುಂಡಪ್ಪ ತುರಾದಿ, ಅನುಷ್ಠಾನ ಸಮಿತಿ ಸದಸ್ಯರಾದ ಸವಿತಾ ಗೊರಂಟ್ಲಿ, ಪರಶುರಾಮ ಕೊರವರ, ಅನ್ನದಾನಯ್ಯಸ್ವಾಮಿ, ರಾಮಣ್ಣ ಚೌಡ್ಕಿ ಹಾಗೂ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net