ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರನ್ನು ಗೌರವಿಸಿ

ಯಲಬುರ್ಗಾ ಪಪಂ ಕಚೇರಿಯಲ್ಲಿ ನಡೆದ ಘನತ್ಯಾಜ್ಯ ನಿರ್ವಹಣಾ-2026 ಕಾಯ್ದೆ ಅನುಷ್ಠಾನ ಕುರಿತ ಸಭೆಯಲ್ಲಿ ಮುಖ್ಯಾಧಿಕಾರಿ ಎಚ್.ನಾಗೇಶ ಮಾತನಾಡಿದರು. ಸಿಬ್ಬಂದಿ ಸುಮಾ ಕಂಚಿ, ನಾರಾಯಣ ಗಂಗಾಖೇಡ, ಸುಭಾಷ್ ಭಾವಿಮನಿ, ರಮೇಶ ಬೆಲೇರಿ, ಯಂಕಣ್ಣ ಜೋಶಿ, ವನರಾಜ, ಶಿವಕುಮಾರ ಸರಗಣಚಾರ ಇತರರಿದ್ದರು.
ಯಲಬುರ್ಗಾ ಪಪಂ ಕಚೇರಿಯಲ್ಲಿ ನಡೆದ ಘನತ್ಯಾಜ್ಯ ನಿರ್ವಹಣಾ-2026 ಕಾಯ್ದೆ ಅನುಷ್ಠಾನ ಕುರಿತ ಸಭೆಯಲ್ಲಿ ಮುಖ್ಯಾಧಿಕಾರಿ ಎಚ್.ನಾಗೇಶ ಮಾತನಾಡಿದರು. ಸಿಬ್ಬಂದಿ ಸುಮಾ ಕಂಚಿ, ನಾರಾಯಣ ಗಂಗಾಖೇಡ, ಸುಭಾಷ್ ಭಾವಿಮನಿ, ರಮೇಶ ಬೆಲೇರಿ, ಯಂಕಣ್ಣ ಜೋಶಿ, ವನರಾಜ, ಶಿವಕುಮಾರ ಸರಗಣಚಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಪಂ ಮುಖ್ಯಾಧಿಕಾರಿ ಎಚ್.ನಾಗೇಶ ಮನವಿ
  • ಘನತ್ಯಾಜ್ಯ ನಿರ್ವಹಣಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಕುರಿತ ಸಭೆ
ಯಲಬುರ್ಗಾ: ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವುದನ್ನು ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಎಚ್.ನಾಗೇಶ ಹೇಳಿದರು.
ಪಟ್ಟಣದ ಪಪಂ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಘನತ್ಯಾಜ್ಯ ನಿರ್ವಹಣಾ-2026 ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕರು ಹಸಿ, ಒಣ, ಮೆಡಿಕಲ್ ತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಗಾಜಿನ ವಸ್ತುಗಳನ್ನು ಪ್ರತ್ಯೇಕಿಸಿ ಕಸದ ಗಾಡಿಗೆ ನೀಡಬೇಕು. ರಸ್ತೆ ಮೇಲೆ ಕಸ ಚೆಲ್ಲುವುದು ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಸುಪ್ರೀಂ ಕೋರ್ಟ್ ಆದೇಶದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಕುಡಿವ ನೀರು ಹಾಗೂ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುವುದು. ಪೌರ ಕಾರ್ಮಿಕರು ನಗರ ಸ್ವಚ್ಛತೆಗೆ ಶ್ರಮಿಸುತ್ತಿದ್ದು, ಸಾರ್ವಜನಿಕರು ಗೌರವದಿಂದ ಕಾಣಬೇಕು. ವ್ಯಾಪಾರಸ್ಥರು ಹಾಗೂ ಉದ್ಯಮಿಗಳು ವ್ಯಾಪಾರ ಮಳಿಗೆಗಳ ಮುಂದೆ ಕಸ ಹಾಕದೆ ಸ್ವಚ್ಛತೆ ಕಾಪಾಡಬೇಕು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020, ಗೋಹತ್ಯೆ ನಿಷೇಧ ಹಾಗೂ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ-1959 ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಪಂ ಸಿಬ್ಬಂದಿ ಸುಮಾ ಕಂಚಿ, ನಾರಾಯಣ ಗಂಗಾಖೇಡ, ಸುಭಾಷ್ ಭಾವಿಮನಿ, ರಮೇಶ ಬೆಲೇರಿ, ಯಂಕಣ್ಣ ಜೋಶಿ, ವನರಾಜ, ಶಿವಕುಮಾರ ಸರಗಣಚಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net