ಡೇಟಾ-ಆಧಾರಿತ ವಿಧಾನಗಳತ್ತ ಸಂಶೋಧನಾ ಕ್ಷೇತ್ರ

ಕನಕಗಿರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದ ಸಮಾರೋಪದಲ್ಲಿ ಕೊಪ್ಪಳ ವಿವಿ ಕುಲಪತಿ ಪ್ರೊ.ಎಸ್.ವಿ.ಡಾಣಿ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯರಾದ ಡಾ.ಬಜರಂಗಬಲಿ, ಪ್ರಾಧ್ಯಾಪಕರಾದ ಸರ್ವಮಂಗಳಮ್ಮ.ಟಿ.ಆರ್, ಜಿಲಾನ ಭಾಷಾ ಇತರರಿದ್ದರು.
ಕನಕಗಿರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದ ಸಮಾರೋಪದಲ್ಲಿ ಕೊಪ್ಪಳ ವಿವಿ ಕುಲಪತಿ ಪ್ರೊ.ಎಸ್.ವಿ.ಡಾಣಿ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯರಾದ ಡಾ.ಬಜರಂಗಬಲಿ, ಪ್ರಾಧ್ಯಾಪಕರಾದ ಸರ್ವಮಂಗಳಮ್ಮ.ಟಿ.ಆರ್, ಜಿಲಾನ ಭಾಷಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಖರತೆ
  • ಆಳವಾದ
  • ದೃಷ್ಟಿಕೋನ
ಕನಕಗಿರಿ: ಸಂಶೋಧನಾ ತಂತ್ರಗಳಲ್ಲಿ ತಂತ್ರಜ್ಞಾನದ ಬೆಳವಣಿಗೆ ಮತ್ತು ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಇತ್ತೀಚಿನ ವಷರ್ಗಳಲ್ಲಿ ಭಾರಿ ಬದಲಾವಣೆಗಳು ಕಾಣುತ್ತಿದ್ದೇವೆ ಎಂದು ಕೊಪ್ಪಳ ವಿವಿ ಕುಲಪತಿ ಪ್ರೊ.ಎಸ್.ವಿ.ಡಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ಸಂಶೋಧನಾ ಘಟಕದಿಂದ ‘ಸಂಶೋಧನಾ ವಿಧಾನದಲ್ಲಿ ಹೊಸ ಪ್ರವೃತ್ತಿಗಳು’ ವಿಷಯದ ರಾಷ್ಟ್ರೀಯ ವಿಚಾರಸಂಕಿರಣದ ಸಮಾರೋಪದಲ್ಲಿ ಮಾತನಾಡಿದರು. ಸಾಂಪ್ರದಾಯಿಕ ವಿಧಾನಗಳಿಂದ ಆಧುನಿಕ, ಡೇಟಾ-ಆಧಾರಿತ ವಿಧಾನಗಳತ್ತ ಸಂಶೋಧನಾ ಕ್ಷೇತ್ರವು ಮುಖ ಮಾಡಿದೆ.
ಹಿಂದೆ ತಿಂಗಳುಗಟ್ಟಲೆ ತೆಗೆದುಕೊಳ್ಳುತ್ತಿದ್ದ ದೊಡ್ಡ ಪ್ರಮಾಣದ ಮಾಹಿತಿ ವಿಶ್ಲೇಷಣೆಯನ್ನು ಇಂದು ಕೃತಕ ಬುದ್ಧಿಮತ್ತೆ (ಎಐ) ಪರಿಕರಗಳು ಕೆಲವೇ ಗಂಟೆಗಳಲ್ಲಿ ನಿಖರವಾಗಿ ಮಾಡುತ್ತಿವೆ. ಹಿಂದಿನ ದಿನಗಳಲ್ಲಿ ಸಂಶೋಧಕರು ಕೇವಲ ಸಂಖ್ಯೆಗಳ ಆಧಾರದ ಪರಿಮಾಣಾತ್ಮಕ ಅಥವಾ ಕೇವಲ ವಿವರಣೆಗಳ ಆಧಾರದ ಗುಣಾತ್ಮಕ ವಿಧಾನಗಳಲ್ಲಿ ಒಂದನ್ನು ಆರಿಸಿಕೊಳ್ಳುತ್ತಿದ್ದರು. ಆದರೆ, ಈಗ ಎರಡು ವಿಧಾನಗಳನ್ನು ಒಟ್ಟಿಗೆ ಬಳಸುವ ‘ಮಿಶ್ರ ವಿಧಾನ’ ಹೆಚ್ಚಾಗಿದೆ. ಇದು ಸಂಶೋಧನೆಗೆ ಹೆಚ್ಚು ನಿಖರತೆ ಮತ್ತು ಆಳವಾದ ದೃಷ್ಟಿಕೋನವನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ಈ ರೀತಿ ಸಂಶೋಧನೆ ಕುರಿತ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸುವುದರಿಂದ ಅವರಲ್ಲಿ ಒಬ್ಬ ಸಮರ್ಥ ಸಂಶೋಧಕರನ್ನು ಹುಟ್ಟುಹಾಕಲು ಸಾಧ್ಯವಾಗಿಸುತ್ತದೆ ಎಂದರು.
ಕೊಪ್ಪಳ ವಿವಿಯ ವಿದ್ಯಾವಿಷಯಕ ಪರಿಷತ್ತಿನ ಸದಸ್ಯ ಅಭಿಷೇಕ್.ಡಿ.ಎಂ ಮಾತನಾಡಿ, ಸಂಶೋಧನಾ ಮನೋಭಾವ, ದಕ್ಷತೆ, ವೈಜ್ಞಾನಿಕ ದೃಷ್ಟಿಕೋನ, ಪರಿಣಾಮಕಾರಿತ್ವ, ಚುರುಕುತನ, ವಾಸ್ತವಿಕತೆ, ಸೃಜನಶೀಲತೆ ಹಾಗೂ ಪ್ರಾಮಾಣಿಕತೆ ಇರವವರನ್ನು ಮಾತ್ರ ಒಬ್ಬ ನಿಜವಾದ ಸಂಶೋಧಕನಾಗಬಲ್ಲ. ಹೆಸರಿನ ಮುಂದೆ ಡಾಕ್ಟರ್ ಎಂಬ ಪದನಾಮ ಪಡೆಯುವುದಕ್ಕಲ್ಲ, ಜ್ಞಾನ ಪಡೆಯುವುದಕ್ಕಾಗಿ ಸಂಶೋಧನೆ ಮಾಡಬೇಕು ಎಂದರು.
ಪ್ರಾಚಾರ್ಯ ಡಾ. ಬಜರಂಗಬಲಿ, ಶ್ರೀ ಕೃಷ್ಣದೇವರಾಯ ವಿವಿಯ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಜಿಲಾನ ಭಾಷಾ, ಪ್ರಾಧ್ಯಾಪಕಿ ಸರ್ವಮಂಗಳಮ್ಮ.ಟಿ.ಆರ್, ಅಧ್ಯಕ್ಷತೆ ವಹಿಸಿದ್ದರು.
ಎನ್‌ಎಸ್ಸೆಸ್ಸೆ ಸಂಯೋಜಕ ಡಾ. ವೀರೇಶ ಕೆಂಗಲ್, ಐಕ್ಯೂಎಸಿ ಘಟಕದ ಸಂಯೋಜಕ ರಕ್ಷಿತ್.ಎ, ಸಾಂಸ್ಕೃತಿಕ ಘಟಕದ ಸಂಯೋಜಕಿ ಲಲಿತಾ.ಎನ್.ಕೆ, ಮಹಿಳಾ ಕೋಶದ ಸಂಯೋಜಕಿ ನಫೀಸ್ ಬಾನು, ಹಿರಿಯ ಉಪನ್ಯಾಸಕರಾದ ಅಮರೇಶ್.ವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net