ಕುಕನೂರು ಪಪಂ ಕಚೇರಿಗೆ ಅಗತ್ಯ ಸಿಬ್ಬಂದಿ ನಿಯೋಜಿಸುವಂತೆ ಆಗ್ರಹಿಸಿ ಪಪಂ ಅಧ್ಯಕ್ಷೆ ಲಲಿತಾ ಪ್ರವೀಣಕುಮಾರ ಮುಧೋಳ ನೇತೃತ್ವದಲ್ಲಿ ಸದಸ್ಯರು ಕೊಪ್ಪಳದಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳಗೆ ಮಂಗಳವಾರ ಮನವಿ ಸಲ್ಲಿಸಿದರು. ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಸದಸ್ಯರಾದ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ರಾಮಣ್ಣ ಬಂಕದಮನಿ, ಬಾಲರಾಜ ಗಾಳಿ, ಶಿವರಾಜ ಯಲ್ಲಪ್ಪಗೌಡ, ಸಿರಾಜ್ ಕರಮುಡಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಖಾಲಿ ಹುದ್ದೆ ಭರ್ತಿಗೆ ಅಧ್ಯಕ್ಷೆ-ಸದಸ್ಯರ ಆಗ್ರಹ
ಡಿಸಿಗೆ ಮನವಿ ಸಲ್ಲಿಕೆ
ಕುಕನೂರು: ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಅಗತ್ಯ ಸಿಬ್ಬಂದಿ ನಿಯೋಜನೆಗೆ ಆಗ್ರಹಿಸಿ ಪಪಂ ಅಧ್ಯಕ್ಷೆ ಲಲಿತಾ ಪ್ರವೀಣಕುಮಾರ ಮುಧೋಳ ನೇತೃತ್ವದಲ್ಲಿ ಸದಸ್ಯರು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳಗೆ ಮಂಗಳವಾರ ಮನವಿ ಸಲ್ಲಿಸಿದರು.
ಪಪಂ ಕಾರ್ಯಾಲಯದಲ್ಲಿ ಅನೇಕ ಹುದ್ದೆಗಳಲ್ಲಿ ಖಾಲಿ ಇದ್ದರಿಂದ ಸಾರ್ವಜನಿಕರ ಕೆಲಸಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದೆ. ಸಮುದಾಯ ಸಂಘಟನಾಧಿಕಾರಿ, ಕಿರಿಯ ಅಭಿಯಂತರ, ಪ್ರಥಮ ದರ್ಜೆ ಸಹಾಯಕ, ಕಿರಿಯ ಆರೋಗ್ಯ ನಿರಿಕ್ಷಕ, ದ್ವಿತೀಯ ದರ್ಜೆ ಸಹಾಯಕ, ಕರವಸೂಲಿಗಾರರು, ನೀರು ಸರಬರಾಜು ಮೇಲ್ವಿಚಾರಕರು ಒಬ್ಬರಂತೆ ಒಟ್ಟು 7 ಹುದ್ದೆಗಳು ಖಾಲಿ ಇವೆ.
ಸಾರ್ವಜನಿಕರು ಹಾಗೂ ಆಡಳಿತಾತ್ಮಕ ಹಿತದೃಷ್ಠಯಿಂದ ಅವಶ್ಯ ಸಿಬ್ಬಂದಿಗಳನ್ನು ಕೂಡಲೇ ಕಾರ್ಯಾಲಯಕ್ಕೆ ಸ್ಥಳ ನಿಯುಕ್ತಗೊಳಿಸಿ ಆದೇಶ ಹೊರಡಿಸಬೇಕು. ಈಗಾಘಲೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ ಅರುಣಕುಮಾರ ನಾಯ್ಕರ್ ಅವರು ಸಂಸದರ ಆಪ್ತ ಸಹಾಯಕರನ್ನಾಗಿ ನಿಯೋಜನೆ ಮಾಡಿದ್ದು, ಕೂಡಲೇ ರದ್ದು ಪಡಿಸಿ, ಬೇರೊಬ್ಬರನ್ನು ನಿಯೋಜನೆ ಮಾಡಬೇಕು. ಕರವಸೂಲಿಗಾರ ಸಿ.ಮೋಹನ್ ಅವರು ವಾರದಲ್ಲಿ 3 ದಿನ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.