ಸಂವಿಧಾನ ಪೀಠಿಕೆ ಓದಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಪೀಠಿಕೆಯನ್ನು ಓದುವ ಚಟುವಟಿಕೆಯನ್ನು ಸಂಸ್ಕತಿಯಾಗಿ ಬಳಸಬೇಕು. ಅದರಲ್ಲಿ ತಿಳಿಸಲಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಅದು ಪ್ರಜಾಪ್ರಭುತ್ವಕ್ಕೆ ತೋರಿಸುವ ನಿಜವಾದ ಗೌರವ ಎಂದರು. ಓಬಿಸಿ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಸಾಂಸತಿಕ ವಿಭಾಗ ಅಧ್ಯಕ್ಷ ಮಂಜುನಾಥ್, ಎಸ್ಟಿ ಮೋರ್ಚಾ ವಿಭಾಗದ ಜಿಲ್ಲಾಧ್ಯಕ್ಷ ರಮೇಶ್ ಡಂಬ್ರಳ್ಳಿ, ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷರಾದ ವೀರೇಶಗೌಡ್ರು ದಳಪತಿ, ನಗರ ಘಟಕದ ಅಧ್ಯಕ್ಷ ಸೋಮನಗೌಡ, ನಗರ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಿರ್ಮಲ ಎನ್ ಮೇದಾರ್ ಇತರರಿದ್ದರು.