ಜೀವನದಲ್ಲಿ ಗುರಿ ತೋರಿಸುವ ಶಿಕ್ಷಕರನ್ನು ಸ್ಮರಿಸಿ

ಕನಕಗಿರಿಯ ಕೆಪಿಎಸ್ ಶಾಲೆಯಲ್ಲಿ 56ನೇ ಹುಟ್ಟು ಹಬ್ಬದ ನಿಮಿತ್ತ ಶಾಸಕ ಶಿವರಾಜ ತಂಗಡಗಿ ಸಸಿಗಳನ್ನು ನೆಟ್ಟರು. ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ ಇತರರಿದ್ದರು.
ಕನಕಗಿರಿಯ ಕೆಪಿಎಸ್ ಶಾಲೆಯಲ್ಲಿ 56ನೇ ಹುಟ್ಟು ಹಬ್ಬದ ನಿಮಿತ್ತ ಶಾಸಕ ಶಿವರಾಜ ತಂಗಡಗಿ ಸಸಿಗಳನ್ನು ನೆಟ್ಟರು. ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶಿವರಾಜ ತಂಗಡಗಿ ಅನಿಸಿಕೆ
  • ಹುಟ್ಟುಹಬ್ಬ ಆಚರಣೆ
ಕನಕಗಿರಿ: ವಿದ್ಯಾರ್ಥಿಗಳು ಆನ್‌ಲೈನ್ ಗೇಮ್‌ಗೆ ಬಲಿಯಾಗದೇ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು. ರಾಜ್ಯ ಮಟ್ಟದಲ್ಲಿ ತಾಲೂಕು ಹೆಸರು ಮಾಡಿದಾಗ ಆಗುವ ಸಂತೋಷ ಮತ್ತೊಂದಿಲ್ಲ ಎಂದು ಶಾಸಕ ಶಿವರಾಜ ತಂಗಡಗಿ ಹೇಳಿದರು.
ನಗರದ ಕೆಪಿಎಸ್ ಶಾಲೆಯಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಸಕ ಶಿವರಾಜ ತಂಗಡಗಿ ಅವರ 56ನೇ ಹುಟ್ಟು ಹಬ್ಬದ ನಿಮಿತ್ತ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚೆಗೆ ಸಮೀಪದ ಹೊಸ ಅಯೋಧ್ಯೆಯಲ್ಲಿ ಆನ್‌ಲೈನ್ ಗೇಮ್‌ಗೆ ದಾಸನಾದ ವಿದ್ಯಾರ್ಥಿ ತಂದೆ ಹಾಗೂ ಅಕ್ಕನನ್ನು ಕೊಂದಿರುವುದು ಖೇದಕರ ಸಂಗತಿ. ಮಕ್ಕಳು ಮೊಬೈಲ್‌ಅನ್ನು ದುರುಪಯೋಗ ಮಾಡಬೇಡಿ. ಜೀವನದಲ್ಲಿ ಗುರಿ ತೋರಿಸುವ ಶಿಕ್ಷಕರು ಹಾಗೂ ಜೀವ ಉಳಿಸುವ ವೈದ್ಯರನ್ನು ಸ್ಮರಿಸಬೇಕು ಎಂದರು.
ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ಆರಂಭಿಸಿದ ಬಳಿಕ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಿರುವುದು ಸಂತಸದ ವಿಚಾರ. ಕೆಲವೇ ದಿನಗಳಲ್ಲಿ ನ್ಯಾಯಾಲಯ ಆರಂಭವಾಗಲಿದೆ ಎಂದು ತಿಳಿಸಿದರು. ಹುಟ್ಟು ಹಬ್ಬದ ನಿಮಿತ್ತ ಇಲ್ಲಿನ ಐತಿಹಾಸಿಕ ಶ್ರೀ ಕನಕಾಚಲ ದೇವಸ್ಥಾನದಲ್ಲಿ ಶಾಸಕ ಶಿವರಾಜ ತಂಗಡಗಿ ಪತ್ನಿ ವಿದ್ಯಾದಂಪತಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಪಂ ಸದಸ್ಯ ಸಂಗಪ್ಪ ಸಜ್ಜನ್ ಆಯೋಜಿಸಿದ್ದ ಹುಟ್ಟು ಹಬ್ಬದ
ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ.ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಶರಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಜಿಪಂ ಮಾಜಿ ಸದಸ್ಯರಾದ ವೀರೇಶ ಸಮಗಂಡಿ, ಹನುಮೇಶ ನಾಯಕ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ನಗರ ಘಟಕದ ಅಧ್ಯಕ್ಷ ರವಿ ಪಾಟೀಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net