ಅಳವಂಡಿ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶರಣರ ನುಡಿ-ಪ್ರವಚನ ಆಲಿಸುವುದರಿಂದ ಒಳ್ಳೆಯ ವಿಚಾರಗಳು ಮೂಡುತ್ತವೆ ಎಂದು ಮೈನಹಳ್ಳಿ- ಬಿಕನಹಳ್ಳಿಯ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬೆಟಗೇರಿ ಗ್ರಾಮದ ಮುಂಡರಗಿಯ ಅನ್ನದಾನೇಶ್ವರ ಶಾಖಾ ಮಠದಲ್ಲಿ ಅಮಾವಾಸ್ಯೆ ಪ್ರಯುಕ್ತ ಆಯೋಜಿಸಿದ್ದ ಶಿವಾನುಭವ ಗೊಷ್ಠಿ ಕಾರ್ಯಕ್ರಮವನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು. ಜನರಲ್ಲಿ ಭಕ್ತಿ ಭಾವ ಮೂಡಿಸುವ ಜತೆಗೆ ವ್ಯಕ್ತಿತ್ವ ಉನ್ನತಿಗೊಳ್ಳಲು, ಮಾನಸಿಕ ನೆಮ್ಮದಿಗೆಧಾರ್ಮಿಕ ಕಾರ್ಯಕ್ರಮ ಸಹಕಾರಿಯಾಗಿವೆ ಎಂದರು.
ಶಾಖಾ ಮಠದ ವ್ಯವಸ್ಥಾಪಕ ಮುತ್ತಯ್ಯ ಹಿರೇಮಠ, ಪ್ರಮುಖರಾದ ಶ್ರೀ ಗುರುಬಸಯ್ಯ ಬ್ರಹನ್ಮಠ, ವೀರೇಶ ಸಜ್ಜನ, ಪ್ರಭು ಶಿವಸಿಂಪಿಗೆರ, ವೀರೇಶ ಲಕ್ಷಾಣಿ, ಬಸವರಾಜ ನಾಗರಡ್ಡಿ, ಬಸವರಾಜ ಚಿಂಚಲಿ, ಶಂಕ್ರಪ್ಪ ಬಡಿಗೇರ, ಬಸಯ್ಯ, ನಾಗಭೂಷಣ, ಮಲ್ಲಪ್ಪ ಮತ್ತೂರ, ಶೇಖರಪ್ಪ ಗುಳದಳ್ಳಿ ಇತರರಿದ್ದರು.