ನೈತಿಕ ಮೌಲ್ಯ ತಿಳಿಯಲು ಧರ್ಮ ಮುಖ್ಯ

ಗಂಗಾವತಿ ತಾಲೂಕಿನ ಹೊಸಳ್ಳಿಯಲ್ಲಿ ಶ್ರೀ ಶಿವಸಿದ್ಧಬೀರಲಿಂಗೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಮತ್ತು ರಥೋತ್ಸವ ಲೋಕಾರ್ಪಣೆ ಕಾರ್ಯಕ್ರಮವನ್ನು ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಸಂಸದ ಕೆ.ರಾಜಶೇಖರ್ ಹಿಟ್ನಾಳ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಇತರರಿದ್ದರು.
ಗಂಗಾವತಿ ತಾಲೂಕಿನ ಹೊಸಳ್ಳಿಯಲ್ಲಿ ಶ್ರೀ ಶಿವಸಿದ್ಧಬೀರಲಿಂಗೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಮತ್ತು ರಥೋತ್ಸವ ಲೋಕಾರ್ಪಣೆ ಕಾರ್ಯಕ್ರಮವನ್ನು ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಸಂಸದ ಕೆ.ರಾಜಶೇಖರ್ ಹಿಟ್ನಾಳ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಮೂಹಿಕ
  • ವಿವಾಹ
  • ಕಾರ್ಯಕ್ರಮ
ಗಂಗಾವತಿ: ಧಾರ್ಮಿಕ ಕಾರ್ಯಕ್ರಮಗಳಿದ್ದಾಗ ಮಾತ್ರ ಸಮಾಜ, ಸಂಸ್ಕೃತಿ ಮತ್ತು ಪರಂಪರೆ ಮುಂದುವರಿಸಿಕೊಂಡು ಹೋಗಲು ಸಾಧ್ಯ ಎಂದು ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಹೊಸಳ್ಳಿಯಲ್ಲಿ ಶ್ರೀ ಶಿವಸಿದ್ಧಬೀರಲಿಂಗೇಶ್ವರ ದೇವಾಲಯದಲ್ಲಿ ಭಾನುವಾರ ಹಮ್ಮಿಕೊಂಡ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಮತ್ತು ರಥೋತ್ಸವ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜ ಒಗ್ಗೂಡಿಸುವುದು ಮತ್ತು ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಧಾರ್ಮಿಕ ಕಾರ್ಯಕ್ರಮ ಪೂರಕವಾಗಿವೆ. ನೈತಿಕ ಮೌಲ್ಯಗಳನ್ನು ತಿಳಿದುಕೊಳ್ಳಲು ಧರ್ಮ ಮುಖ್ಯವಾಗಿದ್ದು, ಅನಾಚಾರ ಮತ್ತು ದುರಾಚಾರಗಳನ್ನು ತಡೆಗಟ್ಟಬಹುದು. ವೈಯಕ್ತಿಕ ಜೀವನದಲ್ಲೂ ಧರ್ಮ ಸಂಕಷ್ಟದಿಂದ ದೂರ ಮಾಡುತ್ತಿದ್ದು, ಪ್ರತಿಯೊಂದು ಜೀವಿಯಲ್ಲಿರುವ ಚೈತನ್ಯ ಶಕ್ತಿಯೇ ಧರ್ಮ. ಮನಸು ಶುದ್ಧವಾಗಿದ್ದಾಗ ಮಾತ್ರ ಚೈತನ್ಯ ಶಕ್ತಿ ಜಾಗೃತಗೊಳ್ಳಲಿದೆ.
ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆಯಾಗಲಿದ್ದು, ಹಿಂದುಳಿದ ವರ್ಗ ಸಮುದಾಯ ಒಗ್ಗೂಡುವ ಮೂಲಕ ರಾಜಕೀಯ ಶಕ್ತಿ ಬಲಿಷ್ಠಗೊಳಿಸಬೇಕಿದೆ. ಸಮಾಜದ ಬೆಂಬಲದಿಂದಲೇ ಸಿಎಂ ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಆಗಲು ಕಾರಣವಾಗಿದೆ. ಪಂಚಗ್ಯಾರಂಟಿಗಳು ಬಡವರಿಗೆ ಅನುಕೂಲವಾಗಿದ್ದು ಜನಪರ ಸರ್ಕಾರವಾಗಿದೆ. ಶಾಸಕರ ವಿವೇಚನಾ ನಿಧಿಯಿಂದ ದೇವಾಲಯದ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ 10ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಸಮಾಜ ಸಂಘಟನೆ ಮೂಲಕ ಅಭಿವೃದ್ಧಿಯ ಮುಖ್ಯವಾಹಿನಿಗೆ ಬರಬೇಕಿದ್ದು, ದೇವಾಲಯ ಮತ್ತು ಸಮುದಾಯ ಭವನ ನಿರ್ಮಾಣದೊಂದಿಗೆ ಗ್ರಾಮಸ್ಥರು ಧಾರ್ಮಿಕವಾಗಿ ಜಾಗೃತಗೊಂಡಿದ್ದಾರೆ. ಬಡ ಕುಟುಂಬಕ್ಕೆ ನೆರವಾದ ಸಾಮೂಹಿಕ ವಿವಾಹಗಳು ನಿರಂತರವಾಗಿ ನಡೆಯಲಿ ಎಂದರು.
ಸಂಸದ ಕೆ.ರಾಜಶೇಖರ್ ಹಿಟ್ನಾಳ್, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಮಾತನಾಡಿದರು. 12 ಜೋಡಿಗಳು ದಾಂಪತ್ಯಕ್ಕೆ ಪದಾರ್ಪಣೆ ಮಾಡಿದರು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ, ತುರವಿಹಾಳ ಮಹಾದೇವ ಗುರುವಿನ್, ಕೊಳಗೇರಿ ಅಭಿವದ್ಧಿ ಮಂಡಳಿ ನಿರ್ದೇಶಕ ರಾಮಕಷ್ಣ , ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಮುಖಂಡರಾದ ವಿಠಲಾಪುರ ಯಮನಪ್ಪ, ಅಯ್ಯಣ್ಣ ರಾಯಚೂರ, ವೆಂಕಟಕೃಷ್ಣ ನಾನಿ, ಎಮ್ಮಿ ಕೀರಪ್ಪ, ಡ್ಯಾಗಿ ರುದ್ರೇಶ, ನಾಗವೇಣಿ, ಕೆ.ನಾಗೇಶಪ್ಪ, ಬೆಟ್ಟಪ್ಪ ಬೆಣಕಲ್, ಮೋರೆ ದುರುಗಪ್ಪ, ನೀಲಕಂಠಪ್ಪ ಹೊಸಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net