ಪರಿಸರ ಸಂರಕ್ಷಣೆಗೆ ಪ್ಲಾಸ್ಟಿಕ್​ ಬಳಕೆ ತಿರಸ್ಕರಿಸಿ

ಕೊಪ್ಪಳ ಎಸ್​ಎಸ್​ಎ್​ಎಸ್​, ಐಸಿಎಸ್​ಇ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಉದ್ಘಾಟಿಸಿದರು. ಶಾಲೆ ವ್ಯವಸ್ಥಾಪಕ ಫಾ. ಮ್ಯಾಥ್ಯೂ ಮಾಮ್ಲ, ಶಿಕ್ಷಕರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕೃಷ್ಣ ಸಿ. ಉಕ್ಕುಂದ ಸೂಚನೆ
ಕೊಪ್ಪಳ : ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪ್ಲಾಸ್ಟಿಕ್​ ಬಳಕೆಯನ್ನು ತಿರಸ್ಕರಿಸಿ, ಕಿಚನ್​ ಗಾರ್ಡನ್​, ಜೇನುಸಾಕಾಣಿಕೆ ಹಾಗೂ ಅಣಬೆ ಬೆಳೆಯಂತಹ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಉತ್ತೇಜಿಸಬೇಕು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಹೇಳಿದರು.
ನಗರದ ಎಸ್​ಎಸ್​ಎ್​ಎಸ್​, ಐಸಿಎಸ್​ಇ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ಸಂರಕ್ಷಣೆ ಜತೆಗೆ ಪರಿಸರ ಮಾಲಿನ್ಯ ತಡೆಗೂ ಎಲ್ಲರೂ ಆದ್ಯತೆ ನೀಡಬೇಕು. ಅಂಗಡಿಗಳಲ್ಲಿ ನೀಡುವ ಪ್ಲಾಸ್ಟಿಕ್​ ವಸ್ತುಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು. ಮನೆಯಲ್ಲಿ ಅಣಬೆ ಬೆಳೆಸುವುದು, ಜೇನುಸಾಕಾಣಿಕೆ ಹಾಗೂ ಕಿಚನ್​ ಗಾರ್ಡನ್​ ನಿರ್ಮಿಸುವುದು ಪರಿಸರಕ್ಕೆ ನೀಡುವ ಮಹತ್ವದ ಕೊಡುಗೆಯಾಗಿದೆ ಎಂದು ತಿಳಿಸಿದರು.
ಶಾಲೆ ವ್ಯವಸ್ಥಾಪಕ ಫಾ. ಮ್ಯಾಥ್ಯೂ ಮಾಮ್ಲ, ಪ್ರಗತಿಪರ ರೈತ ಶ್ರೀಪಾದರಾಜ ಮುರುಡಿ, ಸಂಪನ್ಮೂಲ ವ್ಯಕ್ತಿ ದೇವೇಂದ್ರಪ್ಪ ರ್ಜಿಲಿ, ಶಿಕ್ಷಕರು, ವಿದ್ಯಾರ್ಥಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net