ಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಿ

ಗಂಗಾವತಿ ಶಾಸಕರ ಕಚೇರಿಯಲ್ಲಿ ಆಪ್ತ ಸಹಾಯಕ ಸುರೇಶ ಉಪ್ಪಾರ್‌ಗೆ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಸದಸ್ಯರು ಮನವಿ ಸಲ್ಲಿಸಿದರು. ಎಐಸಿಸಿಟಿಯು ಜಿಲ್ಲಾಧ್ಯಕ್ಷ ವಿಜಯ ದೊರೈರಾಜು, ಪದಾಧಿಕಾರಿಗಳಾದ ಶರಣಬಸವ, ಶಿವಕುಮಾರ ತಿಪ್ಪನಾಳ, ಚಾಂದಪಾಷಾ, ಗುಂಡಪ್ಪ ಮಸಾರಿಕ್ಯಾಂಪ್, ವೆಂಕಟೇಶ್ ಡಂಕನಕಲ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ ಒತ್ತಾಯ
  • ಗಂಗಾವತಿ ಶಾಸಕರ ಕಚೇರಿ ಮುಂದೆ ಪ್ರತಿಭಟನೆ
ಗಂಗಾವತಿ: ಸೇವೆ ಕಾಯಂಗೆ ಒತ್ತಾಯಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಸದಸ್ಯರು ಶಾಸಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಎಐಸಿಸಿಟಿಯು ಜಿಲ್ಲಾಧ್ಯಕ್ಷ ವಿಜಯ ದೊರೈರಾಜು ಮಾತನಾಡಿ, ಜಲಸಂಪನ್ಮೂಲ ಇಲಾಖೆಯ ತುಂಗಭದ್ರಾ ಕಾಲುವೆ ವ್ಯಾಪ್ತಿಯಲ್ಲಿ ಕಳೆದ ಮೂರು ದಶಕಗಳಿಂದ ಕಾರ್ಮಿಕರು ಗುತ್ತಿಗೆ ಆಧಾರದಡಿ ಕರ್ತವ್ಯ ನಿರ್ವಹಿಸುತ್ತಿದ್ದು, ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಸಕಾಲಕ್ಕೆ ಗೌರವಧನ ಬಾರದ್ದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದ್ದು, ಆರೋಗ್ಯ ವಿಮೆ, ಪಿಂಚಣಿ ಸೇರಿ ಇತರ ಸೌಲಭ್ಯಗಳು ದೊರೆಯುತ್ತಿಲ್ಲ. ಎಲ್ಲ ನೌಕರರನ್ನು ಕಾಯಂಗೊಳಿಸುವುದರ ಜತೆಗೆ ಬಾಕಿ ವೇತನ, ಭವಿಷ್ಯ ನಿಧಿ, ಇಎಸ್‌ಐ ಸೇರಿ ಸೌಲಭ್ಯ ಕಲ್ಪಿಸಬೇಕು. ವಿಧಾನ ಮಂಡಲದ ಅಧಿವೇಶನದಲ್ಲಿ ಶಾಸಕರು ಸರ್ಕಾರದ ಗಮನಸೆಳೆದು ಹಕ್ಕೊತ್ತಾಯ ಮಂಡಿಸಬೇಕು. ಕಲ್ಯಾಣ ಕರ್ನಾಟಕದ ವಿಶೇಷ ಸ್ಥಾನಮಾನ 371(ಜೆ) ವಿಧೇಯಕದಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.

ಶಾಸಕರ ಆಪ್ತ ಸಹಾಯಕ ಸುರೇಶ ಉಪ್ಪಾರ್‌ಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಲಕ್ಷ್ಮಣ ಸಿಂಗನಾಳ, ನಾಗೇಶ್ ಮಸಾರಿಕ್ಯಾಂಪ್, ಸೈಯದ್ ಹುಸೇನ್, ನಬೀಸಾಬ್, ಮೆಹಬೂಬ್‌ಸಾಬ್, ಅಬ್ದುಲ್ ಸಾಬ್, ವಿರುಪಣ್ಣ ಹೇರೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net