ವಿಪತ್ತಿನಲ್ಲಿ ನೆರವಿಗೆ ಧಾವಿಸುವುದು ರೆಡ್​ ಕ್ರಾಸ್​ ಸಂಸ್ಥೆ

ಕೊಪ್ಪಳದ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರೆಡ್​ ಕ್ರಾಸ್​ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಉಷಾದೇವಿ ಹಿರೇಮಠ ಮಾಡಿದರು. ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಜಿಲ್ಲಾ ಶಾಖೆ ಸಭಾಪತಿ ಸೋಮರೆಡ್ಡಿ ಅಳವಂಡಿ, ಉಪಸಭಾಪತಿ ಡಾ. ಮಂಜುನಾಥ್​ ಬಿ. ಸಜ್ಜನ್​, ಎಸ್​.ಎಂ. ಬಸವರಾಜ, ಯು.ಎಸ್​ ಸೊಪ್ಪಿಮಠ ಇದ್ದರು.
ಕೊಪ್ಪಳದ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರೆಡ್​ ಕ್ರಾಸ್​ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಉಷಾದೇವಿ ಹಿರೇಮಠ ಮಾಡಿದರು. ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಜಿಲ್ಲಾ ಶಾಖೆ ಸಭಾಪತಿ ಸೋಮರೆಡ್ಡಿ ಅಳವಂಡಿ, ಉಪಸಭಾಪತಿ ಡಾ. ಮಂಜುನಾಥ್​ ಬಿ. ಸಜ್ಜನ್​, ಎಸ್​.ಎಂ. ಬಸವರಾಜ, ಯು.ಎಸ್​ ಸೊಪ್ಪಿಮಠ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಷಾದೇವಿ ಹಿರೇಮಠ ಅಭಿಪ್ರಾಯ
  • ವಿಶ್ವ ರೆಡ್​ ಕ್ರಾಸ್​ ದಿನಾಚರಣೆ
ಕೊಪ್ಪಳ : ಯಾವುದೇ ಪ್ರದೇಶದಲ್ಲಿ ಭೂಕಂಪ, ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತು ಸಂಭವಿಸಿದಾಗ ಮೊದಲಿಗೆ ಜನರ ನೆರವಿಗೆ ಧಾವಿಸುವ ಸಂಸ್ಥೆ ರೆಡ್​ ಕ್ರಾಸ್​ ಎಂದು ಭಾರತ ರತ್ನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಉಷಾದೇವಿ ಹಿರೇಮಠ ಹೇಳಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರೆಡ್​ ಕ್ರಾಸ್​ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಡಿದರು.
ಯಾವುದೇ ಯುದ್ಧದ ಸಂದರ್ಭದಲ್ಲಿ ರೆಡ್​ ಕ್ರಾಸ್​ ಸಂಸ್ಥೆಯ ಚಿಹ್ನೆಯೊಂದಿಗೆ ಸೇವೆ ಸಲ್ಲಿಸುವ ಕಾರ್ಯಕರ್ತರ ಮೇಲೆ ಯಾವುದೇ ರೀತಿಯ ದಾಳಿ ನಡೆಯದಿರುವುದು ಸಂಸ್ಥೆಯ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ. ವಿಪತ್ತುಗಳ ಸಂದರ್ಭದಲ್ಲಿ ಜನರಿಗೆ ಆಹಾರ, ಚಿಕಿತ್ಸೆ ಹಾಗೂ ರಕ್ಷಣೆಯಂತಹ ಅಗತ್ಯ ನೆರವು ನೀಡುವ ಮೂಲಕ ರೆಡ್​ ಕ್ರಾಸ್​ ಸಂಸ್ಥೆ ಮಾನವೀಯ ಸೇವೆಯ ಪ್ರತಿಕವಾಗಿದೆ. ಹಲವಾರು ವಿಪತ್ತುಗಳು ಸಂಭವಿಸಿದಾಗ ನಮ್ಮ ಕೊಪ್ಪಳ ರೆಡ್​ ಕ್ರಾಸ್​ ಸಂಸ್ಥೆಯಿಂದಲೂ ಸಹ ಸಾಕಷ್ಟು ಸೇವೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಜಿಲ್ಲಾ ಶಾಖೆ ಸಭಾಪತಿ ಸೋಮರೆಡ್ಡಿ ಅಳವಂಡಿ ಮಾತನಾಡಿ, ಯುವಕರು ತಮ್ಮ ಸುತ್ತಮುತ್ತ ನಡೆಯುವ ಸಂಕಷ್ಟಗಳಿಗೆ ಸ್ಪಂದಿಸಿ ಮಾನವೀಯ ಸೇವೆ ಸಲ್ಲಿಸಬೇಕು. ರೆಡ್​ ಕ್ರಾಸ್​ ಸಂಸ್ಥೆಗೆ ಜಾತಿ, ಧರ್ಮ, ಮತಭೇದಗಳಿಲ್ಲದೆ ನಿಸ್ವಾರ್ಥ ಸೇವೆಯೇ ಮುಖ್ಯ ಉದ್ದೇಶವಾಗಿದೆ ಎಂದರು.
ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಜಿಲ್ಲಾ ಶಾಖೆ ಉಪಸಭಾಪತಿ ಡಾ. ಮಂಜುನಾಥ್​ ಬಿ. ಸಜ್ಜನ್​ ಮಾತನಾಡಿ, ರೆಡ್​ ಕ್ರಾಸ್​ ಸಂಸ್ಥೆ ಸಮಾಜದಲ್ಲಿ ಸ್ವಯಂಸೇವಾ ಮನೋಭಾವ ಬೆಳೆಸುವ ಮೂಲಕ ಆರೋಗ್ಯಕರ ಸಮಾಜ ನಿಮಾರ್ಣಕ್ಕೆ ಕೊಡುಗೆ ನೀಡುತ್ತಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಎಸ್​.ಎಂ. ಬಸವರಾಜ, ಉಪನ್ಯಾಸಕರಾದ ಯು.ಎಸ್​ ಸೊಪ್ಪಿಮಠ, ಸೋಮಶೇಖರ್​, ರಾಜು ಯು., ಪ್ರಗತಿ, ಸೌಮ್ಯ ನಾಲ್ವಾಡ, ವಿದ್ಯಾರ್ಥಿಗಳಾದ ಬಸವರಾಜ್​ ಘರ್ಜಿನಾಳ, ಸಂಕಲ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net