ಕೊಪ್ಪಳದ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರೆಡ್‌ಕ್ರಾಸ್ ದಿನ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯೆ ಉಷಾದೇವಿ ಹಿರೇಮಠ ವಾತನಾಡಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಪ್ರಾಂತಪಾಲ ಸೋಮರೆಡ್ಡಿ ಅಳವಂಡಿ, ಉಪ ಪ್ರಾಂತಪಾಲ ಡಾ. ಮಂಜುನಾಥ್ ಬಿ. ಸಜ್ಜನ್, ಎಸ್.ಎಂ. ಬಸವರಾಜ, ಯು.ಎಸ್ ಸೊಪ್ಪಿಮಠ ಇದ್ದರು.
ಕೊಪ್ಪಳ: ಯಾವುದೇ ಪ್ರದೇಶದಲ್ಲಿ ಭೂಕಂಪ, ನೈಸರ್ಗಿಕ ಅಥವಾ ವಾನವ ನಿರ್ಮಿತ ವಿಪತ್ತು ಸಂಭವಿಸಿದಾಗ ಮೊದಲಿಗೆ ಜನರ ನೆರವಿಗೆ ಧಾವಿಸುವ ಸಂಸ್ಥೆ ರೆಡ್‌ಕ್ರಾಸ್ ಎಂದು ಪ್ರಾಚಾರ್ಯೆ ಉಷಾದೇವಿ ಹಿರೇಮಠ ಹೇಳಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರೆಡ್‌ಕ್ರಾಸ್ ದಿನ ಕಾರ್ಯಕ್ರಮದಲ್ಲಿ ವಾತನಾಡಿದರು.
ಯುದ್ಧದ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಚಿಹ್ನೆಯೊಂದಿಗೆ ಸೇವೆ ಸಲ್ಲಿಸುವ ಕಾರ್ಯಕರ್ತರ ಮೇಲೆ ಯಾವುದೇ ರೀತಿಯ ದಾಳಿ ನಡೆಯದಿರುವುದು ಸಂಸ್ಥೆಯ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ. ವಿಪತ್ತುಗಳ ಸಂದರ್ಭದಲ್ಲಿ ಜನರಿಗೆ ಆಹಾರ, ಚಿಕಿತ್ಸೆ ಹಾಗೂ ರಕ್ಷಣೆಯಂತಹ ಅಗತ್ಯ ನೆರವು ನೀಡುವ ಮೂಲಕ ಸಂಸ್ಥೆ ವಾನವೀಯ ಸೇವೆಯ ಪ್ರತೀಕವಾಗಿದೆ ಎಂದು ಹೇಳಿದರು.
ಸಂಸ್ಥೆಯ ಜಿಲ್ಲಾ ಶಾಖೆ ಪ್ರಾಂತಪಾಲ ಸೋಮರೆಡ್ಡಿ ಅಳವಂಡಿ ವಾತನಾಡಿ, ಯುವಕರು ತಮ್ಮ ಸುತ್ತಮುತ್ತ ನಡೆಯುವ ಸಂಕಷ್ಟಗಳಿಗೆ ಸ್ಪಂದಿಸಿ ವಾನವೀಯ ಸೇವೆ ಸಲ್ಲಿಸಬೇಕು. ರೆಡ್‌ಕ್ರಾಸ್ ಸಂಸ್ಥೆಗೆ ಜಾತಿ, ಧರ್ಮ, ಮತಭೇದಗಳಿಲ್ಲದೆ ನಿಸ್ವಾರ್ಥ ಸೇವೆಯೇ ಮುಖ್ಯ ಉದ್ದೇಶವಾಗಿದೆ ಎಂದರು.
ಜಿಲ್ಲಾ ಶಾಖೆ ಉಪ ಪ್ರಾಂತಪಾಲ ಡಾ. ಮಂಜುನಾಥ್ ಬಿ. ಸಜ್ಜನ್ ವಾತನಾಡಿ, ಸಂಸ್ಥೆಯು ಸವಾಜದಲ್ಲಿ ಸ್ವಯಂಸೇವಾ ಮನೋಭಾವ ಬೆಳೆಸುವ ಮೂಲಕ ಆರೋಗ್ಯಕರ ಸವಾಜಕ್ಕೆ ಕೊಡುಗೆ ನೀಡುತ್ತಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರವಾಧಿಕಾರಿ ಎಸ್.ಎಂ. ಬಸವರಾಜ, ಉಪನ್ಯಾಸಕರಾದ ಯು.ಎಸ್ ಸೊಪ್ಪಿಮಠ, ಸೋಮಶೇಖರ್, ರಾಜು ಯು., ಪ್ರಗತಿ, ಸೌಮ್ಯಾ ನಾಲ್ವಾಡ, ವಿದ್ಯಾರ್ಥಿಗಳಾದ ಬಸವರಾಜ್ ರ್ಜಿನಾಳ, ಸಂಕಲ್ಪಇತರರಿದ್ದರು.