ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಅಧಿಕ ಮಾಸ ಮತ್ತು ಲೋಕ ಕಲ್ಯಾಣಾರ್ಥ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಹೋಮದ ಪೂರ್ಣಾಹುತಿ ಜರುಗಿತು. ಪುರೋಹಿತ ತಿರುಪತಿ ಜೋಶಿ, ಡಾ.ವೈಷ್ಣವಿ ನರೇಶ ಜೋಶಿ, ಪ್ರಮುಖರಾದ ಡಾ.ಜಿ.ಆರ್.ಅಯೋಧ್ಯಾ, ಹನುಮಂತರಾವ್ ಕುಲ್ಕರ್ಣಿ ಇದ್ದರು.
ಶ್ರೀರಾಮನಗರ: ತಾಲೂಕಿನ ಶ್ರೀರಾಮನಗರದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಅಧಿಕ ಮಾಸ ಮತ್ತು ಲೋಕ ಕಲ್ಯಾಣಾರ್ಥ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಸತ್ಯನಾರಾಯಣ ಪೂಜೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದ ಮೂರ್ತಿಗೆ ವಿಶೇಷ ಪೂಜೆ, ಹೋಮ, ಪೂರ್ಣಾಹುತಿ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಅನ್ನಸಂತರ್ಪಣೆ ನೆರವೇರಿದವು. ಪುರೋಹಿತ ತಿರುಪತಿ ಜೋಶಿ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.