ನೈಜ ಮೌಲ್ಯವನ್ನು ಅರಿತು ಸಾಧಕರಾಗಿ

ಹನುಮಸಾಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಯೋಗ ಸಾಧಕರಾದ ಶಿವಶಂಕರ ಮೆದಿಕೇರಿ, ಆನಂದ ಕಾಟವಾ, ಆದಿತ್ಯ, ಕ್ರೀಡಾ ಸಂಸ್ಥೆಯ ಅಧ್ಯಕ್ಷ ಸತೀಶ ಜಮಖಂಡಿಕರ, ಸಮುದಾಯ ಆರೋಗ್ಯ ಅಧಿಕಾರಿ ಬೀರಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಂಸ್ಕೃತ ಪಂಡಿತ ಪ್ರಲ್ಹಾದಾಚಾರ್ಯ ಪೂಜಾರ ಹೇಳಿಕೆ
  • ಅಂತಾರಾಷ್ಟ್ರೀಯ ಯೋಗ ದಿನ
ಹನುಮಸಾಗರ: ದೇಹ, ಮನಸ್ಸು ಹಾಗೂ ಆತ್ಮದ ಸಮತೋಲನಕ್ಕಾಗಿ ನಿತ್ಯ ಯೋಗ ಮಾಡಬೇಕು ಎಂದು ಸಂಸ್ಕೃತ ಪಂಡಿತ ಪ್ರಲ್ಹಾದಾಚಾರ್ಯ ಪೂಜಾರ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗ ಕೇವಲ ಆಸನಗಳಿಗೆ ಸೀಮಿತವಲ್ಲ. ಯೋಗಕ್ಕೆ ಎಂಟು ಅಂಗಗಳಿವೆ. ಮನಸ್ಸಿನ ನಿಗ್ರಹ, ಆತ್ಮಸಾಕ್ಷಾತ್ಕಾರ ಹಾಗೂ ಚಿತ್ತದ ಶುದ್ಧೀಕರಣವೇ ಯೋಗದ ಮುಖ್ಯ ಉದ್ದೇಶ. ಯೋಗ ಎಂದರೆ ಚಿತ್ತವೃತ್ತಿ ನಿರೋಧ. ವ್ಯಕ್ತಿಯ ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಸಾತ್ವಿಕತೆ ಬೆಳೆಸುತ್ತದೆ. ಯೋಗದ ನೈಜ ಮೌಲ್ಯ ಅರಿತು ಯೋಗ ಸಾಧಕರಾಗಬೇಕು ಎಂದರು.
ಯೋಗ ಸಾಧಕರಾದ ಶಿವಶಂಕರ ಮೆದಿಕೇರಿ, ಆನಂದ ಕಾಟವಾ, ಆದಿತ್ಯ, ಕ್ರೀಡಾ ಸಂಸ್ಥೆಯ ಅಧ್ಯಕ್ಷ ಸತೀಶ ಜಮಖಂಡಿಕರ, ಸಮುದಾಯ ಆರೋಗ್ಯ ಅಧಿಕಾರಿ ಬೀರಪ್ಪ, ಪ್ರಮುಖರಾದ ಶರಣಬಸಪ್ಪ ಮಾಹೋಳ, ಬಸವರಾಜ ಹಳ್ಳೂರ, ಸುಚಪ್ಪ ದೇವರಮನಿ, ರುದ್ರಗೌಡ ಗೌಡಪ್ಪನವರ, ಶೇಖರಪ್ಪ ಕುರಿ, ಸುನಿತಾ ಕೋಮಾರಿ, ಬಸವರಾಜ ದ್ಯಾವಣ್ಣನವರ, ಮಹಾಂತಯ್ಯ ಸೊಪ್ಪಿಮಠ, ಈರಣ್ಣ ವಿಶ್ವಕರ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net