ಅತ್ಯಾಚಾರಿಗೆ 20 ವರ್ಷ ಜೈಲು, 70 ಸಾವಿರ ದಂಡ

Rapist sentenced
Rapist sentenced
Published on

ಪ್ರಮುಖ ಮುಖ್ಯಾಂಶಗಳು

  • ಕೊಪ್ಪಳ ಪೋಕ್ಸೋ ನ್ಯಾಯಾಲಯ ಆದೇಶ
ಕೊಪ್ಪಳ: ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ  ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ಕೊಪ್ಪಳ ತ್ವರಿತ ವಿಲೇವಾರಿ (ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಕುಮಾರ ಡಿ.ಕೆ. 20 ವರ್ಷ ಕಠಿಣ ಜೈಲು ಶಿೆ ಹಾಗೂ 70 ಸಾವಿರ ರೂ. ದಂಡ ವಿಧಿಸಿ ಜ.24ರಂದು ಆದೇಶಿಸಿದ್ದಾರೆ.
ಮಾರುತಿ ಬೋಚನಳ್ಳಿ ಶಿೆಗೆ ಗುರಿಯಾದಾತ. ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. 2024ರ ೆಬ್ರವರಿ 17ರಂದು ಬಾಲಕಿ ಮನೆಗೆ ತೆರಳಿ ಅತ್ಯಾಚಾರ ಮಾಡಿದ್ದಾನೆ. ಅವಳು ಚಿಕ್ಕವಳಿದ್ದೇನೆ ಎಂದು ಬೇಡಿಕೊಂಡರೂ ಬಲವಂತ ಮಾಡಿದ್ದಾನೆ. ಅಂದೇ ಅಪಹರಣ ಮಾಡಿಕೊಂಡು ಚಿಕ್ಕಸಿಂಧೋಗಿ ಗ್ರಾಮದ ಗಾಳೆಮ್ಮ ಗುಡಿ ಬಳಿ ಬಾಲ್ಯವಿವಾಹ ಮಾಡಿಕೊಂಡಿದ್ದಾನೆ. ಅಲ್ಲಿಂದ ಅಳವಂಡಿ, ಮುಂಡರಗಿ, ಗದಗ, ಪುತ್ತೂರ ಮತ್ತು ಸುಳ್ಯ ಮುಂತಾದ ಕಡೆಗಳಲ್ಲಿ ಸುತ್ತಾಡಿಸಿದ್ದಾನೆ. ಈ ಸಂಬಂಧ ಕೊಪ್ಪಳ ಮಹಿಳಾ ಪೊಲೀಸ್​ ಠಾಣೆಯಲ್ಲಿ ಬಾಲಕಿ ತಾಯಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. 
ಪಿಎಸ್​ಐ ನಾಗಪ್ಪ, ಸಿಬ್ಬಂದಿ ರಿಜ್ವಾನ್​ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಪಿಐ ಆಂಜನೇಯ ಡಿ.ಎಸ್​. ಹೆಚ್ಚಿನ ವಿಚಾರಣೆ ನಡೆಸಿದ್ದು, ಡಿಎಸ್ಪಿಗಳಾದ ಎಸ್​.ಆರ್​.ಪಾಟೀಲ್​, ಮುತ್ತಣ್ಣ ಸರವಗೋಳ ಅಂತಿಮ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾರುತಿ ಬೋಚನಳ್ಳಿ ಅಪರಾಧಿಯೆಂದು ತೀರ್ಮಾನಿಸಿದ್ದಾರೆ. 20 ವರ್ಷ ಕಠಿಣ ಜೈಲು ಶಿೆ ಹಾಗೂ 70 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದಾರೆಂದು ವಿಶೇಷ ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net