ಅತ್ಯಾಚಾರಿಗೆ 20 ವರ್ಷ ಜೈಲು ಶಿಕ್ಷೆ

Rapist sentenced
Rapist sentenced
Published on

ಪ್ರಮುಖ ಮುಖ್ಯಾಂಶಗಳು

  • ಪೋಕ್ಸೋ ಕೋರ್ಟ್​ ಆದೇಶ
ಕೊಪ್ಪಳ: ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಪ್ರಕರಣದ ಅಪರಾಧಿ ಖಾದರಸಾಬ ಓಲೇಕಾರನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 75,000 ರೂ. ದಂಡ ವಿಧಿಸಿ ನಗರದ ಪೋಕ್ಸೊ ನ್ಯಾಯಾಲಯವು ಏ. 2ರಂದು ತೀರ್ಪು ನೀಡಿದೆ.
ಬುಕನಟ್ಟಿ ಗ್ರಾಮದ ನಿವಾಸಿ ಖಾದರಸಾಬ, ಉಡುಪಿಯಲ್ಲಿ ಬಾಲಕಿಯ ಕುಟುಂಬದ ಪರಿಚಯ ಬೆಳೆಸಿಕೊಂಡಿದ್ದ. ನವೆಂಬರ್​ 14, 2023ರಂದು ಬಾಲಕಿ ಸ್ವಗ್ರಾಮಕ್ಕೆ ಬಂದಿದ್ದಾಗ ಆಕೆಯನ್ನು ಅಪಹರಿಸಿದ್ದ. ಮೊದಲು ಬಸರಿಹಾಳ ಬಳಿಯ ಹೊಲದಲ್ಲಿ ಹಾಗೂ ನಂತರ ಮೈಸೂರಿನ ತೋಟದ ಶೆಡ್ಡೊಂದರಲ್ಲಿ ಇರಿಸಿ ಆಕೆಯ ಮೇಲೆ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ.
ಬಾಲಕಿಯ ತಂದೆಯ ದೂರಿನನ್ವಯ ಮುನಿರಾಬಾದ್​ ಪೊಲೀಸರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕುಮಾರ ಡಿ.ಕೆ. ಅವರು ಏಪ್ರಿಲ್​ 2ರಂದು ಶಿಕ್ಷೆ ಪ್ರಕಟಿಸಿದರು. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು. ತನಿಖೆಯಲ್ಲಿ ಸಿಪಿಐ ಸುರೇಶ ಡಿ. ಮತ್ತು ತಂಡದ ಸಮಯೋಚಿತ ಕಾರ್ಯಕ್ಷಮತೆ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡಿದೆ ಎಂದು ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net