ಬಾಲಕಿ ಮೇಲೆ ಅತ್ಯಾಚಾರ

ಬಾಲಕಿ ಮೇಲೆ ಅತ್ಯಾಚಾರ
ಬಾಲಕಿ ಮೇಲೆ ಅತ್ಯಾಚಾರ
Published on

ಪ್ರಮುಖ ಮುಖ್ಯಾಂಶಗಳು

  • ವಿಡಿಯೋ ವೈರಲ್​ ಮಾಡಿ ಬೆದರಿಕೆ
  • ಏಳು ಆರೋಪಿಗಳ ಬಂಧನ

ಕೊಪ್ಪಳ : ಜಿಲ್ಲೆಯ ಗ್ರಾಮವೊಂದರ ಪ್ರೌಢ ಶಾಲೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಅದನ್ನು ವಿಡಿಯೋ ಮಾಡಿ ವೈರಲ್​ ಮಾಡಿದ ಟನೆ ವರ್ಷದ ಬಳಿಕ ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದವ ಹಾಗೂ ವಿಡಿಯೋ ಮಾಡಿಕೊಂಡು ವೈರಲ್​ ಮಾಡಿದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ಹಾಗೂ ಅದೇ ಗ್ರಾಮದ ಹರ್ಷಾ ಹಾಗೂ ಕಿರಣ್​ ಎಂಬುವವರು ವರ್ಷದ ಹಿಂದೆ ಪರಿಚಿತರಾಗಿದ್ದಾರೆ. 2025ರ ಅಕ್ಟೋಬರ್​ 10ಂದು ಬಾಲಕಿಯನ್ನು ಕರೆದೊಯ್ದಿದ್ದ ಹರ್ಷಾ ಮತ್ತು ಬರುವಂತೆ ಮಾಡಿ ಅತ್ಯಾಚಾರ ಎಸಗಿದ್ದ. ಅದನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದ. ಇದೇ ವಿಡಿಯೋ ಇಟ್ಟುಕೊಂಡು ಕಿರಣ್​ ಸಹ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ವಿಡಿಯೋ ಕಾಲ್​ ಮಾಡಿ ಅಶ್ಲೀವಾಗುವಂತೆ ಒತ್ತಾಯಿಸಿ ವಿಡಿಯೋ ಮಾಡಿಟ್ಟುಕೊಂಡಿದ್ದ. ಅದನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆಂದು ಬಾಲಕಿ ತಂದೆ ಆಗಸ್ಟ್​ 8ರಂದು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮುಖ್ಯ ಆರೋಪಿಗಳಿಬ್ಬರು ಹಾಗೂ ವಿಡಿಯೋ ವೈರಲ್​ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಇತರ ಐವರನ್ನು ಅರೆಸ್ಟ್​ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
"

ಬಾಲಕಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆ.8ರಂದು ಪ್ರಕರಣ ದಾಖಲಾಗಿದೆ. ವರ್ಷದ ಹಿಂದೆ ಟನೆ ನಡೆದಿದೆ. ಇಬ್ಬರು ಮುಖ್ಯ ಆರೋಪಿಗಳ ವಿರುದ್ಧವಷ್ಟೇ ದೂರು ನೀಡಿದ್ದಾರೆ. ತನಿಖೆಯಲ್ಲಿ ಇನ್ನು ಐವರು ವಿಡಿಯೋ ವೈರಲ್​ ಮಾಡಿದ್ದು ತಿಳಿದಿದ್ದು ಅವರನ್ನೂ ಬಂಧಿಸಲಾಗಿದೆ.

— ಡಾ.ರಾಮ್​ ಎಲ್​.ಅರಸಿದ್ದಿ. ಕೊಪ್ಪಳ ಎಸ್ಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net