ಉದಯೋನ್ಮುಖ ಕಲಾವಿದರಿಗೆ ಡಾ.ರಾಜ್ ಸ್ಫೂರ್ತಿ

ಗಂಗಾವತಿ ಎಸ್‌ಕೆ ಸ್ಟುಡಿಯೋದಲ್ಲಿ ಸಪ್ತಸ್ವರ ಸಾಂಸ್ಕೃತಿಕ ಕಲಾ ಸಂಘದಿಂದ ಚಿತ್ರನಟ ದಿ.ಡಾ.ರಾಜ್‌ಕುಮಾರ್ ಮತ್ತು ಗಾಯಕಿ ಎಸ್.ಜಾನಕಿ ಜನ್ಮದಿನ ಶುಕ್ರವಾರ ಆಚರಿಸಲಾಯಿತು. ಸಂಘದ ಅಧ್ಯಕ್ಷ ಆರ್. ಕಣ್ಣನ್, ಗೌರವಾಧ್ಯಕ್ಷ ತಟ್ಟಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ತಟ್ಟಿ ಶಾಮಣ್ಣ, ಪ್ರಧಾನ ಕಾರ್ಯದರ್ಶಿ ವೀರೇಶ ಹಿರೇಮಠ, ಪದಾಧಿಕಾರಿಗಳಾದ ವೀರೇಶ ಪಪ್ಪಿ, ಹಾಜಿ ಅಲಿಸಾಬ್, ವಿಜಯಲಕ್ಷ್ಮೀ, ಸಾವಿತ್ರಿ ಇತರರಿದ್ದರು.

Published on
ಗಂಗಾವತಿ: ನಗರದ ಎಸ್‌ಕೆ ಸ್ಟುಡಿಯೋದಲ್ಲಿ ಸಪ್ತಸ್ವರ ಸಾಂಸ್ಕೃತಿಕ ಕಲಾ ಸಂಘದಿಂದ ಚಿತ್ರನಟ ದಿ.ಡಾ.ರಾಜ್‌ಕುಮಾರ ಮತ್ತು ಗಾಯಕಿ ಎಸ್.ಜಾನಕಿ ಜನ್ಮದಿನೋತ್ಸವ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಸಂಘದ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಸದಸ್ಯ ಆರ್. ಕಣ್ಣನ್ ಮಾತನಾಡಿ, ಡಾ.ರಾಜ್ ಅಭಿನಯ ವಿಶ್ವಕ್ಕೆ ಮಾದರಿಯಾಗಿದ್ದು, ಎಲ್ಲ ರೀತಿಯ ಪಾತ್ರಗಳನ್ನು ಲೀಲಜಾಲವಾಗಿ ನಿರ್ವಹಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಉದಯೋನ್ಮುಖ ಕಲಾವಿದರಿಗೆ ರಾಜ್ ಸ್ಫೂರ್ತಿಯಾಗಿದ್ದಾರೆ. ಅದರಂತೆ ಬಹುಭಾಷಾ ಗಾಯಕಿ ಎಸ್.ಜಾನಕಿ ಅವರು ಕನ್ನಡ ಚಿತ್ರರಂಗದಲ್ಲಿ ಅಜರಾಮರಾಗಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಜನ್ಮದಿನ ಆಚರಿಸಲಾಯಿತು.
ಸಂಘದ ಗೌರವಾಧ್ಯಕ್ಷ ತಟ್ಟಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ತಟ್ಟಿ ಶಾಮಣ್ಣ, ಪ್ರಧಾನ ಕಾರ್ಯದರ್ಶಿ ವೀರೇಶ ಹಿರೇಮಠ, ಪದಾಧಿಕಾರಿಗಳಾದ ವೀರೇಶ ಪಪ್ಪಿ, ಹಾಜಿ ಅಲಿಸಾಬ್, ಗೋಟೂರು ಪ್ರವೀಣ್, ಲಕ್ಕಪ್ಪ ನಾಯಕ, ಮೌನೇಶ, ಹುಸೇನಪೀರಾ, ರಾಮಮೂರ್ತಿ ನವಲಿ, ಸಿ.ಡಿ.ರಾಮಕಷ್ಣ, ಡಿ. ಶಂಭುನಾಥ, ಸಾವಿತ್ರಿ, ವಿಜಯಲಕ್ಷ್ಮೀ, ಜಯಶ್ರೀದೇವಿ, ಎಂ.ಡಿ. ಮುಸ್ತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net