ಕೊಪ್ಪಳ : ತೀವ್ರ ಮಳೆ ಕೊರತೆಯಿಂದ ಕಂಗಾಲಾಗಿದ್ದ ಜನತೆಗೆ ಗುರುವಾರ ಸಂಜೆ ಸುರಿದ ವರ್ಷಧಾರೆ ಕೊಂಚ ಆಶಾಭಾವನೆ ಮೂಡಿಸಿದೆ. ಜೂನ್, ಜುಲೈ ಅರ್ಧದವರೆಗೂ ಹನಿ ಮಳೆಯೂ ಸುರಿಯದ ಕಾರಣ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಬೆಳಗಿನಿಂದ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ ವೇಳೆಗೆ ದಟ್ಟ ಮೋಡಗಳು ಆವರಿಸಿ ಕೆಲ ಕಾಲ ವರ್ಷಧಾರೆಯಾಯಿತು. ಕೊಪ್ಪಳ ನಗರ, ಸಿಂದೋಗಿ, ಹಾಲವರ್ತಿ ಸೇರಿ ವಿವಿಧ ಗ್ರಾಮೀಣ ಭಾಗಗಳಲ್ಲಿ ಕೆಲಹೊತ್ತು ವರುಣನ ಸಿಂಚನ ಕಾಣಿಸಿತು. ಬೀದಿ ಬದಿ ವ್ಯಾಪಾರಿಗಳು ನೆನೆಯುವಂತಾಯಿತು. ಚರಂಡಿಗಳು ತುಂಬಿ ಹರಿದವು.