ಬಿಸಿಯೂಟ ಯೋಜನೆಗೆ ಕಳಪೆ ಆಹಾರ ಸಾಮಗ್ರಿ ಪೂರೈಸಿದ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮವಹಿಸಲು ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯುನಿಯನ್ ಪದಾಧಿಕಾರಿಗಳು ಶುಕ್ರವಾರ ಕೊಪ್ಪಳದಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಿದರು. ಸಂಚಾಲಕರಾದ ಬಸವರಾಜ ಶೀಲವಂತರ, ಎಸ್.ಎ.ಗಾರ್, ಗಾಳೆಪ್ಪ ಮುಂಗೋಲಿ. ಮಖಬೂಲ್ ರಾಯಚೂರು, ಶಿವಪ್ಪ ಹಡಪದ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಿಸಿಯೂಟ ತಯಾರಕರ ಯುನಿಯನ್ ಆಗ್ರಹ
ಕೊಪ್ಪಳ: ಬಿಸಿಯೂಟ ಯೋಜನೆಗೆ ಕಳಪೆ ಆಹಾರ ಸಾಮಗ್ರಿ ಪೂರೈಸಿದ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮವಹಿಸಲು ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯುನಿಯನ್ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಿದರು.
ಸರ್ಕಾರಿ, ಅನುದಾನಿತ ಶಾಲೆಗಳಿಗೆ ಬಿಸಯೂಟ ಯೋಜನೆಯಡಿ ಕಳಪೆ ಆಹಾರ ಸಾಮಗ್ರಿ ಪೂರೈಕೆಯಾಗುತ್ತಿದೆ. ಟೆಂಡರ್ ಪಡೆದ ಏಜೆನ್ಸಿ ಹಾಗೂ ಗುತ್ತಿಗೆದಾರರು ಮಕ್ಕಳಿಗೆ ಅನ್ಯಾಯ ಎಸಗುತ್ತಿದ್ದಾರೆ. ಮೊದಲಿನಿಂದಲೂ ಅವ್ಯವಹಾರ ನಡೆದುಕೊಂಡು ಬರುತ್ತಿದೆ. ಪ್ರಕರಣ ಬೆಳಕಿಗೆ ಬಂದಾಗಲಷ್ಟೇ ಕ್ರಮವಹಿಸಿ ಸರ್ಕಾರ ಮೌನವಾಗುತ್ತಿದೆ. ಹಲವು ಬಾರಿ ಇಂಥ ಟನೆ ಮರುಕಳಿಸಿದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲವೆಂದು ಆರೋಪಿಸಿದರು.
ಅಡುಗೆದಾರರ ಮೇಲೆ ಕ್ರಮ ಕೈಗೊಳ್ಳುವುದರಲ್ಲಿ ಅರ್ಥವಿಲ್ಲ. ಕಳಪೆ ಆಹಾರ ಸಾಮಗ್ರಿ ಪೂರೈಸಿದ ಏಜೆನ್ಸಿ, ಗುತ್ತಿಗೆದಾರರನ್ನು ಶಿಸಬೇಕು. ಟೆಂಡರ್ ರದ್ದು ಮಾಡಬೇಕು. ಅದಕ್ಕೆ ಸಹಕರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಅಡುಗೆದಾರರ ಕೆಲಸ ಮುಂದುವರಿಸುವಂತೆ ಆಗ್ರಹಿಸಿದರು.