ಮಕ್ಕಳ ಕಲಿಕೆಗೆ ಸಾರ್ವಜನಿಕರು ಸಹಕರಿಸಲಿ

ತಿಗರಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಅಗತ್ಯ ಸಾಮಗ್ರಿಗಳನ್ನು ದಾನ ಮಾಡಿದ ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ ಕವಲೂರು ಹಾಗೂ ಶಿಕ್ಷಕ ಮಲ್ಲಿಕಾರ್ಜುನ ಯತ್ನಳ್ಳಿ ಅವರನ್ನು ಸನ್ಮಾನಿಸಲಾಯಿತು. ಬಿಇಒ ಹನುಮಂತಪ್ಪ, ಶಿಕ್ಷಣ ಸಂಯೋಜಕ ಮಹಾದೇವಪ್ಪ ಗುಳೇದ, ಬಿಆರ್‌ಪಿ ಲಕ್ಷ್ಮಣ ಪಲ್ಲೇದ್, ಸಿಆರ್‌ಪಿ ಬಸವರಾಜ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬಿಇಒ ಹನುಮಂತಪ್ಪ ಅಭಿಮತ
  • ಅಳವಂಡಿ ತಿಗರಿ ಎಸ್ಡಿಎಂಸಿ ಅಧ್ಯಕ್ಷ ಶಿಕ್ಷಕ ಸನ್ಮಾನ
ಅಳವಂಡಿ: ಸಮೀಪದ ತಿಗರಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಸ್ವಂತ ಖರ್ಚಿನಲ್ಲಿ ಬೋರ್‌ವೆಲ್ ಕೊರೆಸಿ, ಮೋಟಾರ್-ಪಂಪ್ ಹಾಗೂ ಅಗತ್ಯ ಸಾಮಗ್ರಿಗಳನ್ನು ದಾನ ಮಾಡಿದ ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ ಕವಲೂರು ಹಾಗೂ ಶಿಕ್ಷಕ ಮಲ್ಲಿಕಾರ್ಜುನ ಯತ್ನಳ್ಳಿಗೆ ಬಿಇಒ ಹನುಮಂತಪ್ಪ ಶುಕ್ರವಾರ ಸನ್ಮಾನಿಸಿದರು.
ಬಿಇಒ ಹನುಮಂತಪ್ಪ ಮಾತನಾಡಿ, ಮಕ್ಕಳಿಗೆ ಕುಡಿವ ನೀರು ಒದಗಿಸಲು ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ ಹಾಗೂ ಶಿಕ್ಷಕ ಮಲ್ಲಿಕಾರ್ಜುನ ಅವರ ಕಾರ್ಯ ಎಲ್ಲರಿಗೂ ಮಾದರಿ. ಇಲಾಖೆ ಜತೆಗೆ ಸಾರ್ವಜನಿಕರು ಮೂಲಸೌಕರ್ಯ ಒದಗಿಸಲು ಸಹಕರಿಸಿದರೆ ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ ಎಂದರು.
ಶಿಕ್ಷಣ ಸಂಯೋಜಕ ಮಹಾದೇವಪ್ಪ ಗುಳೇದ, ಬಿಆರ್‌ಪಿ ಲಕ್ಷ್ಮಣ ಪಲ್ಲೇದ್, ಸಿಆರ್‌ಪಿ ಬಸವರಾಜ, ಮುಖ್ಯಶಿಕ್ಷಕ ಬಾಬು ಹಕ್ಕಂಡಿ, ಶಿಕ್ಷಕರಾದ ನಾಗರಾಜ, ಸಿದ್ದಪ್ಪ, ರೂಪಾ, ಯಮನೂರಸಾಬ, ಅಜಯ್, ಗೋಣೇಶ, ಮಲ್ಲಿಕಾರ್ಜುನ, ಕವಿತಾ, ಉಮಾ, ಶಶಿಕಲಾ, ಶಂಕ್ರಮ್ಮ, ಪಾರ್ವತಿ, ಅನಿತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net