ವಹಿವಾಟು ಕೇಂದ್ರಕ್ಕೆ ಸಿಸಿ ಕಣ್ಗಾವಲು ಕಡ್ಡಾಯ

ಗಂಗಾವತಿಯಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಜಾಗೃತಿ ಅಭಿಯಾನದಲ್ಲಿ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಬುಧವಾರ ಮಾತನಾಡಿದರು. ನಗರ ಪಿಐ ಪ್ರಕಾಶ ಆರ್. ಯಾತನೂರ್, ಪಿಎಸೈ ಜಿ.ಟಿ.ನಾಗರಾಜ್ ಇತರರಿದ್ದರು.
ಗಂಗಾವತಿಯಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಜಾಗೃತಿ ಅಭಿಯಾನದಲ್ಲಿ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಬುಧವಾರ ಮಾತನಾಡಿದರು. ನಗರ ಪಿಐ ಪ್ರಕಾಶ ಆರ್. ಯಾತನೂರ್, ಪಿಎಸೈ ಜಿ.ಟಿ.ನಾಗರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಹೇಳಿಕೆ
ಗಂಗಾವತಿ: ಅಪರಾಧ ಪ್ರಕರಣಗಳ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಪ್ರಮುಖವಾಗಿದ್ದು, ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಪ್ರಕಾರ ಸಹಕರಿಸುವಂತೆ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಮನವಿ ಮಾಡಿದರು.
ನಗರದ ಸಿಬಿಎಸ್ ವೃತ್ತದ ಬಳಿಯ ಶ್ರೀ ಈರಣ್ಣ ದೇವರ ದೇವಾಲಯದ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. .
ಜನರ ನಿರೀಕ್ಷೆಯಂತೆ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಅದರಂತೆ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಪ್ರಕಾರ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಪೊಲೀಸರ ಸಲಹೆಗಳನ್ನು ಪಾಲಿಸಬೇಕಿದ್ದು, ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪ್ರತಿಯೊಂದು ವಹಿವಾಟು ಕೇಂದ್ರಕ್ಕೂ ಸಿಸಿ ಕ್ಯಾಮರಾ ಅಳವಡಿಕೆ, ಅಲರಾಂ ವ್ಯವಸ್ಥೆ ಸೇರಿ ಸುರಕ್ಷತಾ ಸಾಧನೆಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಮೊಬೈಲ್‌ನಲ್ಲಿ ವೀಕ್ಷಿಸುವಂತಹ ಸಿಸಿ ಕ್ಯಾಮರಾಗಳು ಬಂದಿದ್ದು, ಕನಿಷ್ಠ ಕ್ಯಾಮರಾ ಹಾಕಿಕೊಳ್ಳುವ ವ್ಯವಸ್ಥೆ ಮಾಡಬೇಕಿದೆ ಎಂದರು.
ನಗರ ಪಿಐ ಪ್ರಕಾಶ ಆರ್. ಯಾತನೂರ್ ಮಾತನಾಡಿ, ಪ್ರಮುಖರಸ್ತೆ ಎರಡೂ ಬದಿಯ ವ್ಯಾಪಾರಿಗಳು ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕಿದ್ದು, 15 ದಿನದ ಗಡುವು ನೀಡಲಾಗುವುದು ಎಂದರು.
ಪಿಎಸೈ ಜಿ.ಟಿ.ನಾಗರಾಜ್, ಎಎಸೈ ಶಿವಶರಣಪ್ಪ ಸೇರಿ ವರ್ತಕರ ಸಂಘದ ಪದಾಧಿಕಾರಿಗಳು ಮತ್ತು ಪ್ರಮುಖರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net