ಅಲೆಮಾರಿಗಳಿಗೆ ವಸತಿ-ನಿವೇಶನ ಒದಗಿಸಲಿ

ಅಲೆಮಾರಿ ಕುಟುಂಬಗಳಿಗೆ ನಿವೇಶನ, ವಸತಿ ಒದಗಿಸಲು ಆಗ್ರಹಿಸಿ ಕುಷ್ಟಗಿಯಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯದ ನಿಗಮ ಮಂಡಳಿಯ ಜಿಲ್ಲಾ ಸಮಿತಿ ನಾಮನಿರ್ದೇಶಿತ ಸದಸ್ಯ ಕಾಸಿಂ ಶ್ರೀಶೈಲ್ ಕೈಗೊಂಡ ಧರಣಿಗೆ ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ಪ್ರಮುಖರಾದ ಬಸವರಾಜ ಗಾಣಗೇರ, ಚಂದ್ರಕಾಂತ ನಾಲಗಾರ, ದೇವರಾಜ ಹಜಾಳದ, ಭೀಮಾಶಂಕರ್, ಕಿರಣ ಜ್ಯೋತಿ, ಅಲೆಮಾರಿ ಸಮುದಾಯದ ರಾಮಗಿರಿಯಪ್ಪ, ರಾಮಣ್ಣ, ದುರಗಪ್ಪ, ಶಾಂತಪ್ಪ, ಹುಸೇನಪ್ಪ, ಚನ್ನಮ್ಮ, ಸಾಲಮ್ಮ, ಲಲಿತಮ್ಮ, ಹನಮವ್ವ ಇತರರಿದ್ದರು.

Published on

ಕುಷ್ಟಗಿ: ಹನುಮಸಾಗರದ ಎಪಿಎಂಸಿ ಹಾಗೂ ಸರ್ಕಾರಿ ಜಾಗದಲ್ಲಿ ಐವತ್ತು ವರ್ಷಗಳಿಂದ ಗುಡಿಸಲು, ತಾತ್ಕಾಲಿಕ ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ 25ಕ್ಕೂ ಹೆಚ್ಚು ಅಲೆಮಾರಿ, ಬುಡಕಟ್ಟು ಜನಾಂಗದ ನಿರಾಶ್ರಿತ ಕುಟುಂಬಗಳಿಗೆ ನಿವೇಶನ, ಮನೆ ಮಂಜೂರು ಮಾಡಲು ಆಗ್ರಹಿಸಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹತ್ತಿರ ಅಲೆಮಾರಿ ಬುಡಕಟ್ಟು ಸಮುದಾಯದ ನಿಗಮ ಮಂಡಳಿಯ ಜಿಲ್ಲಾ ಸಮಿತಿ ನಾಮನಿರ್ದೇಶಿತ ಸದಸ್ಯ ಕಾಸಿಂ ಶ್ರೀಶೈಲ್ ಕೈಗೊಂಡ ಧರಣಿಗೆ ಗುರುವಾರ ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.

ನಿರಾಶ್ರಿತರಿಗೆ ಮನೆ ನಿರ್ಮಾಣ ಮಾಡಿಕೊಡಲು ಹನುಮಸಾಗರ ಪಪಂ ಇಲ್ಲದ ಸಬೂಬು ಹೇಳುತ್ತಿದೆ. ಈಗಾಗಲೇ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಹಲವಾರು ಬಾರಿ ಮನವಿ ನೀಡಿದರೂ ಹಾರಿಕೆ ಉತ್ತರ ಸಿಕ್ಕಿದೆ. ಆದ್ದರಿಂದ ಕಳೆದ 32 ದಿನಗಳಿಂದ ನಿರಂತರ ಹೋರಾಟ ಮಾಡಲಾಗುತ್ತಿದೆ. ಹೀಗಿದ್ದರೂ ಶಾಸಕರು ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಆಲಿಸಿಲ್ಲ ಅಳಲು ತೋಡಿಕೊಂಡರು.
ಪ್ರಗತಿಪರ ಸಂಘಟನೆಗಳ ಮುಖ್ಯಸ್ಥ ಬಸವರಾಜ ಗಾಣಗೇರ ಮಾತನಾಡಿ, ನಿರಾಶ್ರಿತರಿಗೆ ವಸತಿ ಕಲ್ಪಿಸಲು ಆಗ್ರಹಿಸಿ ಮಾಡುತ್ತಿರುವ ಧರಣಿಗೆ ನಮ್ಮ ಬೆಂಬಲವಿದೆ. ಪರಿಹಾರ ಸಿಗುವವರೆಗೂ ಧರಣಿ ಕೈಬಿಡಲ್ಲ. ಹಾಗೆಯೇ 80ನೇ ಸ್ವಾತಂತ್ರ್ಯೋತ್ಸವ ದಿನ ಆ.15ರಂದು ಹೋರಾಟ ಸಮಿತಿಯಿಂದ ಫ್ರೀಡಂ ಫೈಟರ್ಸ್ ಫೆಸ್ಟಿವಲ್ ಕಾರ್ಯಕ್ರಮ ಆಯೋಜಿಸಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಛದ್ಮವೇಷ ಧಾರಿಗಳನ್ನು ತೆರೆದ ವಾಹನಗಳಲ್ಲಿ ಮೆರವಣಿಗೆ ನಡೆಸಿ ಅವರನ್ನು ಗೌರವಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net