ಮಾಸಿಕ 10 ಸಾವಿರ ರೂ. ಮಾಸಾಶನ ಒದಗಿಸಿ

ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ಗಂಗಾವತಿ ತಾಲೂಕಾಡಳಿತ ಸೌಧದ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು. ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಎ. ಹುಲುಗಪ್ಪ, ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎ. ಎಲ್. ತಿಮ್ಮಣ್ಣ, ಪದಾಧಿಕಾರಿಗಳಾದ ಶೇಖಮ್ಮ ಹೊಸಳ್ಳಿ, ಗಂಗಮ್ಮ, ಮರಿಯಮ್ಮ ಇತರರಿದ್ದರು.
ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ಗಂಗಾವತಿ ತಾಲೂಕಾಡಳಿತ ಸೌಧದ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು. ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಎ. ಹುಲುಗಪ್ಪ, ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎ. ಎಲ್. ತಿಮ್ಮಣ್ಣ, ಪದಾಧಿಕಾರಿಗಳಾದ ಶೇಖಮ್ಮ ಹೊಸಳ್ಳಿ, ಗಂಗಮ್ಮ, ಮರಿಯಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೇವದಾಸಿ
  • ಮಹಿಳೆ
  • ಕ್ಷೇಮಾಭಿವೃದ್ಧಿ
ಗಂಗಾವತಿ: ಮಾಸಾಶನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ವಿವಿಧ ಗ್ರಾಮಗಳಿಂದ ಬಂದಿದ್ದ ವಿಮುಕ್ತ ದೇವದಾಸಿಯರು ಮತ್ತು ಕುಟುಂಬ ಸದಸ್ಯರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ಶಿರಸ್ತೇದಾರ ಕೃಷ್ಣವೇಣಿಗೆ ಸಲ್ಲಿಸಿದರು. ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಎ. ಹುಲುಗಪ್ಪ ಮತ್ತು ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎ. ಎಲ್. ತಿಮ್ಮಣ್ಣ ಮಾತನಾಡಿ, ವಿಮುಕ್ತ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಮಾಸಾಶನ ಸಮರ್ಪಕವಾಗಿ ವಿತರಿಸುತ್ತಿಲ್ಲ.
ಗಣತಿ ನೆಪದಲ್ಲಿ ಕೆಲವು ಕುಟುಂಬದ ಸದಸ್ಯರನ್ನು ಸೌಲಭ್ಯಗಳ ಪಟ್ಟಿಯಿಂದ ಕೈಬಿಡುತ್ತಿರುವುದು ಸರಿಯಲ್ಲ. ಮಾಸಿಕ 10 ಸಾವಿರ ರೂ. ಮಾಸಾಶನ ವಿತರಿಸುವುದರ ಜತೆಗೆ ಗಣತಿ ದೋಷವನ್ನು ಸರಿಪಡಿಸಬೇಕು. ವಯಸ್ಸಿನ ಮಿತಿ ನಿಗದಿಪಡಿಸದೆ ಕುಟುಂಬ ಸದಸ್ಯರಿಗೂ ಸೌಲಭ್ಯ ಕಲ್ಪಿಸಬೇಕು. ನಿವೇಶನ ವಿತರಣೆ ಜತೆಗೆ ಮನೆ ನಿರ್ಮಿಸಿಕೊಡಬೇಕು.
ಉಪಜೀವನಕ್ಕೆ ಐದು ಎಕರೆ ಭೂಮಿ, ಬದುಕು ಕಟ್ಟಿಕೊಳ್ಳಲು ಐದು ಲಕ್ಷ ರೂ. ಸಹಾಯಧನ, ಮಕ್ಕಳಿಗೆ ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳಲ್ಲಿ ಉಚಿತ ಶಿಕ್ಷಣ ವ್ಯವಸ್ಥೆಯಾಗಬೇಕು. ನಿರುದ್ಯೋಗಿ ಯುವಕರಿಗೆ 10 ಸಾವಿರ ಸಹಾಯಧನ ವಿತರಿಸಬೇಕು. ಖಾತರಿ ಯೋಜನೆಯಡಿ 300 ದಿನ ಉದ್ಯೋಗದ ಜತೆಗೆ ದಿನಕ್ಕೆ 800 ರೂ. ಕೂಲಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಶೇಖಮ್ಮ ಹೊಸಳ್ಳಿ, ಗಂಗಮ್ಮ, ಮರಿಯಮ್ಮ, ಹುಲಿಗೆಮ್ಮ, ಈರಮ್ಮ, ಚೆನ್ನಮ್ಮ, ಎಚ್. ಗಂಗಮ್ಮ, ಗೌರಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net