ಗಂಗಾವತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 235 ಮತಗಟ್ಟೆಗಳಿಗೆ ಬಿಎಲ್‌ಎ2ಗಳನ್ನು ನಿಯೋಜಿಸಲಾಗಿದ್ದು, ಎಲ್ಲರ ಮಾಹಿತಿಯನ್ನುಒಳಗೊಂಡ ಪಟ್ಟಿಯನ್ನು ಸಲ್ಲಿಸಲಾಯಿತು. ವಿಧಾನಸಭೆ ಕ್ಷೇತ್ರದ ಬಿಎಲ್‌ಎ1 ವೀರೇಶ ಬಲ್ಕುಂದಿ ಮಾತನಾಡಿ, ಚುನಾವಣಾ ಆಯೋಗದ ನಿಯಮಾವಳಿಯಂತೆ ಬಿಎಲ್‌ಎ2 ಪ್ರತಿನಿಧಿಗಳನ್ನು ಎಲ್ಲ ಮತಗಟ್ಟೆಗಳಿಗೆ ನಿಯೋಜಿಸಲಾಗಿದ್ದು, ಎಸ್‌ಐಆರ್ ಮತ ಪರಿಷ್ಕರಣೆ ಸಂದರ್ಭದಲ್ಲಿ ಪ್ರತಿನಿಧಿಗಳನ್ನು ಪರಿಗಣಿಸಬೇಕು. ಅಗತ್ಯವಿರುವ ಗುರುತಿನ ಪತ್ರವನ್ನು ನೀಡುವಂತೆ ಮನವಿ ಮಾಡಿದರು.