ನಿವೇಶನರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲಿ

ಕೊಪ್ಪಳ ಜಿಲ್ಲಾಡಳಿತ ಭವನದ ಎದುರು ಸ್ಲಂ ನಿವಾಸಿಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸಂಘಟನಾ ಸಂಚಾಲಕ ಇಮ್ತಿಯಾಜ್ ಆರ್. ವಾನ್ವಿ, ಪದಾಧಿಕಾರಿಗಳಾದ ಎಂ.ಬಿ. ನದಾಫ್, ನಾಗರತ್ನಾ ಅಳವಂಡಿ, ರೇಷ್ಮಾಬಾನು ಕೆ. ಯಮನೂರಪ್ಪ, ಪ್ರತಿಭಾ ಹೊಸಳ್ಳಿ, ಗಂಗಮ್ಮ ಶ್ರೀಧರ ಮಠ, ಸುಜಾತಾ ಹಿರೇಮಠ ಇತರರಿದ್ದರು.
ಕೊಪ್ಪಳ ಜಿಲ್ಲಾಡಳಿತ ಭವನದ ಎದುರು ಸ್ಲಂ ನಿವಾಸಿಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸಂಘಟನಾ ಸಂಚಾಲಕ ಇಮ್ತಿಯಾಜ್ ಆರ್. ವಾನ್ವಿ, ಪದಾಧಿಕಾರಿಗಳಾದ ಎಂ.ಬಿ. ನದಾಫ್, ನಾಗರತ್ನಾ ಅಳವಂಡಿ, ರೇಷ್ಮಾಬಾನು ಕೆ. ಯಮನೂರಪ್ಪ, ಪ್ರತಿಭಾ ಹೊಸಳ್ಳಿ, ಗಂಗಮ್ಮ ಶ್ರೀಧರ ಮಠ, ಸುಜಾತಾ ಹಿರೇಮಠ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಡಳಿತ
  • ಭವನ
  • ಸಮಿತಿ

ಕೊಪ್ಪಳ:

ನಿರಾಶ್ರಿತರಿಗೆ ನಿವೇಶನ ಮತ್ತು ಮನೆಗಳನ್ನು ಹಂಚಿಕೆ ವಾಡಬೇಕು ಎಂದು ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಜಿಲ್ಲಾ ಸ್ಲಂ ನಿವಾಸಿಗಳ ಹೋರಾಟ ಸಮಿತಿಯಿಂದ ಶನಿವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಸ್ಲಂ ಜನಾಂದೋಲನ ರಾಜ್ಯ ಸಂಘಟನಾ ಸಂಚಾಲಕ ಇಮ್ತಿಯಾಜ್ ಆರ್. ವಾನ್ವಿ ವಾತನಾಡಿ, ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಸಾವಿರಾರು ಬಡ ಕುಟುಂಬಗಳು ಇನ್ನೂ ಗುಡಿಸಲು ಹಾಗೂ ಬಾಡಿಗೆ ಮನೆಗಳಲ್ಲಿ ಮೂಲ ಸೌಲಭ್ಯಗಳಿಲ್ಲದೆ ಜೀವನ ನಡೆಸುತ್ತಿವೆ. ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಅರ್ಜಿಗಳನ್ನು ಸಲ್ಲಿಸಿ ಹಣ ಪಾವತಿಸಿದ್ದರೂ ಅನೇಕ ಫಲಾನುಭವಿಗಳಿಗೆ ಈವರೆಗೆ ನಿವೇಶನ ಅಥವಾ ಮನೆಗಳು ಮಂಜೂರಾಗಿಲ್ಲ ಎಂದು ಆರೋಪಿಸಿದರು.
ಸಂಟನೆ ಸದಸ್ಯ ಎಂ.ಬಿ. ನದಾಫ್ ವಾತನಾಡಿ, ವಿಶೇಷ ವರ್ಗದ ಕೂಲಿ ಕಾರ್ಮಿಕರು, ಹವಾಲಿ ಕಾರ್ಮಿಕರು, ಬೀಡಿ ಕಾರ್ಮಿಕರು, ಮನೆ ಕೆಲಸಗಾರರು, ಚಿಂದಿ ಆಯುವವರು ಸೇರಿದಂತೆ ಶ್ರಮಜೀವಿ ಕುಟುಂಬಗಳು ಹಲವು ವರ್ಷಗಳಿಂದ ವಸತಿಗಾಗಿ ಅರ್ಜಿ ಸಲ್ಲಿಸಿದ್ದರೂ ಸ್ಪಂದನೆ ದೊರೆತಿಲ್ಲ. ನಿವೇಶನರಹಿತ ಕುಟುಂಬಗಳ ಬೇಡಿಕೆಗಳನ್ನು ತಕ್ಷಣ ಈಡೇರಿಸಿ, ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸ್ಲಂ ನಿವಾಸಿಗಳ ಹೋರಾಟ ಸಮಿತಿ ಸಂಚಾಲಕಿ ನಾಗರತ್ನಾ ಅಳವಂಡಿ, ಪದಾಧಿಕಾರಿಗಳಾದ ರೇಷ್ಮಾಬಾನು ಕೆ. ಯಮನೂರಪ್ಪ, ಪ್ರತಿಭಾ ಹೊಸಳ್ಳಿ, ಭವಾನಿ ಕೊಪ್ಪಳ, ಸವಿತಾ ಕುಕನೂರು, ಗಂಗಮ್ಮ ಶ್ರೀಧರ ಮಠ, ಸುಜಾತಾ ಹಿರೇಮಠ, ಈರಮ್ಮ ಲಾಚನಮಠ, ದಾಕ್ಷಾಯಿಣಿ ಗಂಧದಮಠ, ಖಾದರಬೀ ನಜೇರಸಾಬ್, ರೈಹವಾನಬಿ ಫಕೀರಸಾಬ್, ರಿಜ್ವಾನಾಬೇಗಂ ಜಿಲಾನಸಾಬ್, ಯಲ್ಲಮ್ಮ ಮಡಿವಾಳ, ಲಾಲಬಿ ಹುಸೇನಸಾಬ್, ಮಹ್ಮದಸಾಬ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net