ಜನಗಣತಿ ಕಾರ್ಯಕ್ಕೆ ಸಮರ್ಥ ತರಬೇತಿ ನೀಡಿ

ಕೊಪ್ಪಳದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಫೀಲ್ಡ್​ ಟ್ರೇನರ್​ಗಳ ತರಬೇತಿ ಕಾರ್ಯಾಗಾರದಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳ  ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಬೆಂಗಳೂರಿನ ಜನಗಣತಿ ಕೇಂದ್ರ ಕಚೇರಿಯ ಮಾಸ್ಟರ್​ ಟೆನರ್​ ಫಣಿ ಕುಮಾರ್​ ಹಾಗೂ ಯಲಬುರ್ಗಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶಿವಶಂಕರ ಕರಡಕಲ್​ ಇದ್ದರು.
ಕೊಪ್ಪಳದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಫೀಲ್ಡ್​ ಟ್ರೇನರ್​ಗಳ ತರಬೇತಿ ಕಾರ್ಯಾಗಾರದಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಬೆಂಗಳೂರಿನ ಜನಗಣತಿ ಕೇಂದ್ರ ಕಚೇರಿಯ ಮಾಸ್ಟರ್​ ಟೆನರ್​ ಫಣಿ ಕುಮಾರ್​ ಹಾಗೂ ಯಲಬುರ್ಗಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶಿವಶಂಕರ ಕರಡಕಲ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ. ಸುರೇಶ್​ ಇಟ್ನಾಳ ಸೂಚನೆ
  • ಫೀಲ್ಡ್​ ಟ್ರೇನರ್​ಗಳ ತರಬೇತಿ ಕಾರ್ಯಗಾರ
ಕೊಪ್ಪಳ : ದೇಶದ ಅಭಿವೃದ್ಧಿ ಯೋಜನೆಗಳ ರೂಪಿಸುವಲ್ಲಿ ಜನಗಣತಿಯ ಅಂಕಿ-ಅಂಶಗಳು ಅಡಿಪಾಯವಾಗಿದ್ದು, ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಫೀಲ್ಡ್​ ಟ್ರೇನರ್​ಗಳು ಸಮರ್ಥವಾಗಿ ತರಬೇತಿ ನೀಡಬೇಕು ಎಂದು ಡಿಸಿ ಡಾ. ಸುರೇಶ್​ ಬಿ. ಇಟ್ನಾಳ ಹೇಳಿದರು.
ಕೊಪ್ಪಳ ಜಿಪಂ ಜೆ.ಹೆಚ್​. ಪಟೇಲ್​ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಫೀಲ್ಡ್​ ಟ್ರೇನರ್​ಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಈ ಬಾರಿಯ ಜನಗಣತಿಯು ಹಳೆಯ ಮ್ಯಾನುಯಲ್​ ಪದ್ಧತಿಯನ್ನು ಕೈಬಿಟ್ಟು, ಸಂಪೂರ್ಣವಾಗಿ ಮೊಬೈಲ್​ ಆ್ಯಪ್​ ಮೂಲಕ ನಡೆಯಲಿದೆ. ಇದು ಪ್ರಕ್ರಿಯೆಯಲ್ಲಿ ನಿಖರತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲಿದೆ. ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು ಇದನ್ನು ರಾಷ್ಟ್ರ ನಿಮಾರ್ಣದ ಅಳಿಲು ಸೇವೆ ಎಂದು ಭಾವಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಪ್ರತಿ ಗ್ರಾಮದಲ್ಲಿ 150 ರಿಂದ 200 ಕುಟುಂಬಗಳಿಗೊಂದು ಬ್ಲಾಕ್​ ಗುರುತಿಸಿ, ನಿಖರವಾದ ನಕ್ಷೆ ಮತ್ತು ಪಟ್ಟಿ ಸಿದ್ಧಪಡಿಸಬೇಕು. ಬ್ಲಾಕ್​ ರಚನೆಯಲ್ಲಿ ಸಣ್ಣ ತಪ್ಪಾದರೂ ಇಡೀ ಪ್ರಕ್ರಿಯೆ ಹಳಿ ತಪ್ಪುತ್ತದೆ. ಆದ್ದರಿಂದ ಅಧಿಕಾರಿಗಳು ಪ್ರತಿ ಬ್ಲಾಕ್​ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಗಣತಿದಾರರನ್ನು ಅವರು ವಾಸಿಸುವ ಅಥವಾ ಕೆಲಸ ಮಾಡುವ ಬ್ಲಾಕ್​ಗಳಲ್ಲೇ ನಿಯೋಜಿಸಬೇಕು. ಸ್ಥಳಿಯರು ಲಭ್ಯವಿಲ್ಲದಿದ್ದರೆ ಮಾತ್ರ 200 ಮೀಟರ್​ ವ್ಯಾಪ್ತಿಯ ಸರ್ಕಾರಿ ನೌಕರರನ್ನು ಬಳಸಿಕೊಳ್ಳಬೇಕು. ವಾರ್ಡ್​ ಬಿಲ್​ ಕಲೆಕ್ಟರ್​ಗಳು ಹಾಗೂ ಕ್ಷೇತ್ರ ಮಟ್ಟದ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಬೆಂಗಳೂರಿನ ಜನಗಣತಿ ಕೇಂದ್ರ ಕಚೇರಿಯ ಮಾಸ್ಟರ್​ ಟೆನರ್​ ಫಣಿ ಕುಮಾರ್​ ಹಾಗೂ ಯಲಬುರ್ಗಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶಿವಶಂಕರ ಕರಡಕಲ್​ ಹಾಗೂ ಫೀಲ್ಡ್​ ಟ್ರೇನರ್​ಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net