

ಪ್ರಮುಖ ಮುಖ್ಯಾಂಶಗಳು
ಗಂಗಾವತಿ: ವಡ್ಡರಹಟ್ಟಿ ಗ್ರಾಪಂ ವ್ಯಾಪ್ತಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಸದಸ್ಯರು ಕೆಕೆಆರ್‌ಟಿಸಿ ಡಿಪೋ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಖಜಾಂಚಿ ಆರ್.ಕೆ.ರಮೇಶ ಮಾತನಾಡಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಾಳ್, ಮಲಕನಮರಡಿ ಮತ್ತು ವಡ್ಡರಹಟ್ಟಿ ಮಾರ್ಗವಾಗಿ ಹೆಚ್ಚುವರಿ ಬಸ್ ಅಗತ್ಯವಿದೆ. ಸಕಾಲಕ್ಕೆ ಬಸ್ ಸಂಚಾರವಿಲ್ಲದಿದ್ದರಿಂದ ಖಾಸಗಿ ವಾಹನಗಳಿಗೆ ಬರುವಂತಾಗಿದೆ.
ಕೆಲವೊಮ್ಮೆ ಶಾಲಾ-ಕಾಲೇಜುಗಳಿಂದ ಹೊರಗುಳಿಯುವ ಸ್ಥಿತಿ ಬಂದಿದೆ ಎಂದರು. ವಿಭಾಗೀಯ ಸಂಚಾಲಕ ಯಮನೂರಪ್ಪ ನಾಯಕ ಹುಲಿಹೈದರ್, ಪದಾಧಿಕಾರಿಗಳಾದ ದುರುಗಪ್ಪ ಹೊಸಳ್ಳಿ, ಶಿವಪ್ಪ ಪೂಜಾರ ಹುಳ್ಕಿಹಾಳ್, ಹುಲುಗಪ್ಪ ಡಂಬರ್, ಸಣ್ಣಪ್ಪ ದೇವರಮನಿ ಇತರರಿದ್ದರು.