ವಿದ್ಯತ್​ ಖಾಸಗೀಕರಣ ಖಂಡಿಸಿ ಪ್ರತಿಭಟನೆ

ಕೊಪ್ಪಳದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ (ಚುನ್ನಪ್ಪ ಪುಜೇರಿ ಬಣ) ನಗರದಲ್ಲಿ 30ಕ್ಕೂ ಹೆಚ್ಚು ಟ್ರಾಕ್ಟರ್​ ಗಳೊಂದಿಗೆ ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದವರೆಗೂ ಪ್ರತಿಭಟನಾ ಮೇರವಣಿಗೆ ನಡೆಸಿದರು. ಜಿಲ್ಲಾಧ್ಯಕ್ಷ ಸುಖಮುನಿಯಪ್ಪ ಬಿ., ಜಿಲ್ಲಾ ಉಪಾಧ್ಯಕ್ಷ ಹನುಮಂತ ನಾಯಕೋಡಿ, ರಾಜ್ಯ ಪ್ರಧಾನ ಕಾರ್ದರ್ಶಿ ಶರಣಪ್ಪ ಮುರಳಿ, ರಾಜ್ಯ ಕಾರ್ಯದರ್ಶಿ ಮಹೇಶಗೌಡ ಸುಬೇದಾರ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ನಾಯಕ ಇದ್ದರು.
ಕೊಪ್ಪಳದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ (ಚುನ್ನಪ್ಪ ಪುಜೇರಿ ಬಣ) ನಗರದಲ್ಲಿ 30ಕ್ಕೂ ಹೆಚ್ಚು ಟ್ರಾಕ್ಟರ್​ ಗಳೊಂದಿಗೆ ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದವರೆಗೂ ಪ್ರತಿಭಟನಾ ಮೇರವಣಿಗೆ ನಡೆಸಿದರು. ಜಿಲ್ಲಾಧ್ಯಕ್ಷ ಸುಖಮುನಿಯಪ್ಪ ಬಿ., ಜಿಲ್ಲಾ ಉಪಾಧ್ಯಕ್ಷ ಹನುಮಂತ ನಾಯಕೋಡಿ, ರಾಜ್ಯ ಪ್ರಧಾನ ಕಾರ್ದರ್ಶಿ ಶರಣಪ್ಪ ಮುರಳಿ, ರಾಜ್ಯ ಕಾರ್ಯದರ್ಶಿ ಮಹೇಶಗೌಡ ಸುಬೇದಾರ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ನಾಯಕ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಂದ ಜೆಸ್ಕಾಂ ಅಧಿಕಾರಿಗೆ ಮನವಿ
ಕೊಪ್ಪಳ : ರಾಜ್ಯದ 15 ಜಿಲ್ಲೆಗಳಲ್ಲಿ ವಿದ್ಯುತ್​ ಸರಬರಾಜು ಮಾಡಲು ಟಾಟಾ ಕಂಪನಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸಬೇಕು ಯಾವುದೆ ಕಾರಣಕ್ಕೂ ವಿದ್ಯುತ್​ ಖಾಸಗೀಕರಣಕ್ಕೆ ಒಪ್ಪಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ (ಚುನ್ನಪ್ಪ ಪುಜೇರಿ ಬಣ) ಗುರುವಾರ ನಗರದಲ್ಲಿ 30ಕ್ಕೂ ಹೆಚ್ಚು ಟ್ರಾಕ್ಟರ್​ ಗಳೊಂದಿಗೆ ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದವರೆಗೂ ಪ್ರತಿಭಟನಾ ಮೇರವಣಿಗೆ ನಡೆಸಿದರು.
ರೈತ ಮುಖಂಡರು ಮಾತನಾಡಿ, ಸಾವಿರಾರು ಕೋಟಿಯ ಆಸ್ತಿ ಹೊಂದಿರುವ ಕೆಪಿಟಿಸಿಎಲ್​ನ ವಿದ್ಯುತ್​ ಜಾಲವನ್ನು ಖಾಸಗೀಕರಣ ಮಾಡಲು ಹೊರಟಿದ್ದು ಏಕೆ ? ಖಾಸಗೀಕರಣ ಆದರೆ ರೈತರಿಗೆ ಬಡವರಿಗೆ ತೊಂದರೆ. ಅದು ರೈತ ವಿರೋಧಿ ನೀತಿಯಾಗಿದೆ. ಖಾಸಗೀಕರಣದಿಂದ ರೈತರಿಗೆ ಉಚಿತ ವಿದ್ಯುತ್​ ನಿಂತು, ಕೃಷಿಗೆ ತೊಂದರೆಯಾಗಲಿದೆ. ಅಲ್ಲದೇ ಯೂನಿಟ್​ ಕರೆಂಟ್​ ದರ ಹೆಚ್ಚಿ ಜನರಿಗೆ ಹೊರೆಯಾಗಿದೆ. ವಿದ್ಯುತ್​ ಸರಬರಾಜಿಗೆ ಟಾಟಾ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ಖಾಸಗೀಕರಣದಿಂದ ಸ್ಮಾರ್ಟ್​ ಮೀಟರ್​ ಬರುತ್ತದೆ. ಸರ್ಕಾರದ ಗೃಹ ಜ್ಯೋತಿಯಂತಹ ಅನೇಕ ಜನಪರ ಯೋಜನೆಗಳು ನಿಲ್ಲುತ್ತವೆ. ಮೊಬೈಲ್​ ರಿಚಾರ್ಜ್​ ನಂತೆ ವಿದ್ಯುತ್​ ಗಾಗಿ ಅಡ್ವಾನ್ಸ್​ ರಿಚಾರ್ಜ್​ ಮಾಡಿಸುವ ಸ್ಥೀತಿ ಬರಬಹುದು. ಅನ್ನದಾತ ಈಗಲೇ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಹೊಸ ವ್ಯವಸ್ಥೆಯಿಂದ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಆಸ್ತಿ ಮತ್ತು ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ವಿದ್ಯುತ್​ ಖಾಸಗೀಕರಣವು ರೈತ ವಿರೋಧಿ ನೀತಿಯಾಗಿದೆ. ಕೃಷಿ ಉತ್ಪನ್ನಗಳ ಉತ್ಪಾದನೆಯೂ ಕುಂಠಿತವಾಗುತ್ತದೆ. ಇದರಿಂದ ಖಾಸಗಿಯವರಿಗೆ ಹೆಚ್ಚು ಲಾಭವಾಗುತ್ತದೆ. ಆದ್ದರಿಂದ ಖಾಸಗೀಕರಣ ಕೈಬಿಡಬೇಕು, ರೈತರ ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್​ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ, ಬಳಿಕ ಜೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ (ಚುನ್ನಪ್ಪ ಪುಜೇರಿ ಬಣ) ಸಂಘಟನೆ ಜಿಲ್ಲಾಧ್ಯಕ್ಷ ಸುಖಮುನಿಯಪ್ಪ ಬಿ., ಜಿಲ್ಲಾ ಉಪಾಧ್ಯಕ್ಷ ಹನುಮಂತ ನಾಯಕೋಡಿ, ರಾಜ್ಯ ಪ್ರಧಾನ ಕಾರ್ದರ್ಶಿ ಶರಣಪ್ಪ ಮುರಳಿ, ರಾಜ್ಯ ಕಾರ್ಯದರ್ಶಿ ಮಹೇಶಗೌಡ ಸುಬೇದಾರ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ನಾಯಕ, ರೈತ ಮುಖಂಡರಾದ ಬಸವರಾಜ ಚಿಲವಾಡಗಿ, ಶಿವಕುಮಾರ ಹಳ್ಳಿ, ಯಮನೂರಪ್ಪ ಹಳ್ಳಿಕೇರಿ, ಸಿದ್ದಲಿಂಗಪ್ಪ ಕಿನ್ನಾಳ, ವಿರೇಶಪ್ಪ ಹಣವಾಳ, ರಮೇಶ ಕೊಟ್ಟೂರ, ಈರಯ್ಯ, ಇಸ್ಮಾಯಿಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net