ಗವಿಶ್ರೀಗಳು ತಾರ್ಕಿಕ ಅಂತ್ಯ ಕಾಣಿಸಲಿ

ಕೊಪ್ಪಳದಲ್ಲಿ ಕೈಗಾರಿಕೆಗಳ ವಿಸ್ತರಣೆ ವಿರೋಧಿ ಹೋರಾಟದಲ್ಲಿ ಗುರುವಾರ ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿದರು. ಪ್ರಮುಖರಾದ ಶ್ರೀ ಕೋರಣೇಶ್ವರ ಸ್ವಾಮೀಜಿ, ಡಾ.ಪ್ರತಾಪ ಸಿಂಗ್​ ತಿವಾರಿ, ಎಸ್​.ಎಲ್​. ಮಾಲಿಪಾಟೀಲ್​, ಎಚ್​.ಎಸ್​. ಪಾಟೀಲ್​ ಇದ್ದರು.
ಕೊಪ್ಪಳದಲ್ಲಿ ಕೈಗಾರಿಕೆಗಳ ವಿಸ್ತರಣೆ ವಿರೋಧಿ ಹೋರಾಟದಲ್ಲಿ ಗುರುವಾರ ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿದರು. ಪ್ರಮುಖರಾದ ಶ್ರೀ ಕೋರಣೇಶ್ವರ ಸ್ವಾಮೀಜಿ, ಡಾ.ಪ್ರತಾಪ ಸಿಂಗ್​ ತಿವಾರಿ, ಎಸ್​.ಎಲ್​. ಮಾಲಿಪಾಟೀಲ್​, ಎಚ್​.ಎಸ್​. ಪಾಟೀಲ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಕುಂ.ವೀರಭದ್ರಪ್ಪ ಹೇಳಿಕೆ
ಕೊಪ್ಪಳ: ಕಾರ್ಖಾನೆ ಭಾದಿತ ಗ್ರಾಮಗಳ ಜನರು ಬದುಕುವ ಆಸೆ ಬಿಟ್ಟಿದ್ದಾರೆ. ಹೋರಾಟ ಆರಂಭಿಸಿದ ಗವಿಶ್ರೀಗಳು ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಒತ್ತಾಯಿಸಿದರು.
ಬಿಎಸ್​ಪಿಎಲ್​ ಸೇರಿ ಇತರ ಕೈಗಾರಿಕೆಗಳ ವಿಸ್ತರಣೆ ಖಂಡಿಸಿ ನಗರದ ಸಿಎಂಸಿ ಆವರಣದಲ್ಲಿ ಹಮ್ಮಿಕೊಂಡಿರುವ ನಿರಂತರ ಧರಣಿಯಲ್ಲಿ ಗುರುವಾರ ಭಾಗಿಯಾಗಿ ಮಾತನಾಡಿದರು.
ಗ್ರಾಮಸ್ಥರ ಮೊಗದಲ್ಲಿ ಲವಲವಿಕೆ ಇಲ್ಲ. ಯಾವ ಪಕ್ಷದವರನ್ನು ನಂಬದ ಸ್ಥಿತಿಗೆ ಬಂದಿದ್ದಾರೆ. ತಮ್ಮನ್ನು ರಸುವವರು ಯಾರೆಂದು ಹತಾಶೆಗೊಂಡಿದ್ದಾರೆ. ಗವೀಶ್ರೀಗಳು ಪ್ರವಚನಕ್ಕೂ ಮೊದಲು ಜನರ ಜೀವ ಉಳಿಸಲಿ. ಸರ್ಕಾರದ ವಿರುದ್ಧ ದನಿ ಎತ್ತಲಿ. ಹೋರಾಟ ಆರಂಭಿಸಿದ ಅವರು ತಾರ್ಕಿಕ ಅಂತ್ಯ ಕಾಣಿಸಲಿ. ಯಾಕೆ ಹಿಂದಡಿ ಇಟ್ಟರು ? ವೈದ್ಯರು ಗ್ರಾಮಸ್ಥರಿಗೆ ವಾಸ ಮಾಡದಂತೆ ಹೇಳುತ್ತಿದ್ದಾರೆ. ಅವರೆಲ್ಲ ಎಲ್ಲಿ ಹೋಗಬೇಕು ? ತುಂಗಭದ್ರಾ ನದಿ ಮಲೀನವಾಗುತ್ತಿದೆ. ರಾಜಕಾರಣಿಗಳು ಬಂದು ಅಯ್ಯೋ ಎಂದು ಹೋದವರು ಮರೆತುಬಿಡುತ್ತಾರೆ ಎಂದರು.
ಆಳಂದ ವಿರಕ್ತ ಮಠದ ಶ್ರೀ ಕೋರಣೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಹೋರಾಟ ಸಾರ್ಥಕ, ಸಾತ್ವಿಕವಾಗಿದೆ. ಜೀವ, ಆರೋಗ್ಯ, ಭೂಮಿ, ಕೃಷಿ ಉಳಿಸಿಕೊಳ್ಳಲು ನಡೆಸಿದ ನಿಮ್ಮ ಹೋರಾಟಕ್ಕೆ ಗದುಗಿನ ತೋಂಟದ ಶ್ರೀ ಸಿದ್ದಲಿಂಗ ಸ್ವಾಮಿಗಳೆ ಪ್ರೇರಣೆಯಾಗಿದ್ದಾರೆ. ಇಲ್ಲಿ ಜಾನುವಾರುಗಳು ನೀರು ಇಲ್ಲದೆ, ಬಸಾಪುರ ಕೆರೆಯನ್ನು ಬಲ್ಡೋಟ ನುಂಗಿ ಹಾಕಿದೆ. ಗೋರಕ್ಷಕರು ಎಲ್ಲಿದ್ದಾರೆ ? ಈಗ ಗೋವುಗಳು ನೆನಪಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಧಾರವಾಡದ ಬರಹಗಾರ್ತಿ ಶಾರದಾ ಗೋಪಾಲ್​ ಮಾತನಾಡಿ, 3 ವರ್ಷದ ಮಗುವಿಗೆ ಪಾಶ್ವವಾಯು, ಹೃದಯದಲ್ಲಿ ರಂಧ್ರ, ಮಹಿಳೆಯರು ಗರ್ಭ ಧರಿಸುತ್ತಿಲ್ಲ ಎಂದರೆ ಎಷ್ಟು ಘೋರ ಸ್ಥಿತಿ ಎಂದು ಭಾವುಕರಾದರು.
ಕಲಬುರಗಿ ವಿವಿ ವಿಶ್ರಾಂತ ಕುಲಪತಿ ಡಾ.ಪ್ರತಾಪ ಸಿಂಗ್​ ತಿವಾರಿ, ಪ್ರಮುಖರಾದ ಎಸ್​.ಎಲ್​. ಮಾಲಿಪಾಟೀಲ್​, ಎಚ್​.ಎಸ್​. ಪಾಟೀಲ್​ ಮಾತನಾಡಿದರು.
ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ, ಅಲ್ಲಮಪ್ರಭು ಬೆಟ್ಟದೂರು, ಮಂಜುನಾಥ ಗೊಂಡಬಾಳ, ರಾಜೇಶ ಸಸಿಮಠ, ಸೌಮ್ಯ ನಾಲ್ವಾಡ, ಡಾ. ಮಂಜುನಾಥ ಸಜ್ಜನ್​, ಜ್ಯೋತಿ ಗೊಂಡಬಾಳ, ಸರೋಜಾ ಬಾಕಳೆ, ಮಂಜುನಾಥ, ಗವಿಸಿದ್ದರೆಡ್ಡಿ, ಬಸವರಾಜ ಪೂಜಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net