ಕಾರ್ಪೊರೇಟ್​ ಭೂಕಬಳಿಕೆ ವಿರೋಧಿಸಿ ಪ್ರತಿಭಟನೆ

ಬೇಡಿಕೆ ಈಡೇರಿಕೆಗಾಗಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರನ್ನು ಹೋಲಿಸರು ತಡೆದು ವಶಕ್ಕೆ ಪಡೆದರು.
ಬೇಡಿಕೆ ಈಡೇರಿಕೆಗಾಗಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರನ್ನು ಹೋಲಿಸರು ತಡೆದು ವಶಕ್ಕೆ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಪ್ಪಳವನ್ನು ಬರಪೀಡಿತ ಜಿಲ್ಲೆ ಘೋಷಿಸಲು ಆಗ್ರಹ

ಕೊಪ್ಪಳ : ಬಲವಂತದ ಭೂಸ್ವಾಧಿನ, ಕಾರ್ಪೊರೇಟ್​ ಭೂಕಬಳಿಕೆ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಸಿಐಟಿಯು, ಕರ್ನಾಟಕ ಕೃಷಿ ಗ್ರಾಮೀಣ ಕಾರ್ಮಿಕರ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘಗಳ ಜಿಲ್ಲಾ ಸಮಿತಿಗಳಿಂದ ನಗರದಲ್ಲಿ ಪ್ರತಿಭಟನೆ ಮೇರಣಿಗೆ ನಡೆಸಲಾಯಿತು.

ಐತಿಹಾಸಿಕ ಕ್ವಿಟ್​ ಇಂಡಿಯಾ ಚಳವಳಿ ಸ್ಫೂರ್ತಿಯಲ್ಲಿ ಕಾರ್ಪೊರೇಟ್​ಗಳೇ ದೇಶ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ದೇಶಾದ್ಯಂತ ಪ್ರತಿಭಟನೆ ಹಾಗೂ ಜೈಲ್​ ಭರೋ ಚಳವಳಿಗೆ ಕರೆ ನೀಡಲಾಗಿತ್ತು. ಇದರ ಭಾಗವಾಗಿ ನಗರದಲ್ಲಿಯೂ ಪ್ರತಿಭಟನೆ ನಡೆಸಿದ ಹೋರಾಟಗಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ ಬರ ಪರಿಹಾರ ಕ್ರಮ ಕೈಗೊಳ್ಳಬೇಕು. ರೈತರ ಭೂಮಿಯನ್ನು ವರ್ತುಲ ರಸ್ತೆ, ಕೈಗಾರಿಕೆ, ರೈಲ್ವೆ ಹಾಗೂ ವಸತಿ ಯೋಜನೆಗಳ ಹೆಸರಿನಲ್ಲಿ ಬಲವಂತವಾಗಿ ಸ್ವಾಧಿನಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಕಾರ್ಪೊರೇಟ್​ ಭೂಕಬಳಿಕೆಗೆ ಕಡಿವಾಣ ಹಾಕಬೇಕು.
ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಿ ಪರಿಷತ ಕನಿಷ್ಠ ವೇತನ ಜಾರಿಗೊಳಿಸಬೇಕು. ರೈತರು, ಕೃಷಿ ಕೂಲಿಕಾರರು ಹಾಗೂ ಮಹಿಳೆಯರ ಎಲ್ಲ ರೀತಿಯ ಸಾಲ ಮನ್ನಾ ಮಾಡಿ ಋಣಮುಕ್ತ ಕಾಯ್ದೆ ಜಾರಿಗೊಳಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡಲು ಶಾಶ್ವತ ಕಾನೂನು ರೂಪಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಯೋಜನೆ ಜಾರಿ. ಪೆಟ್ರೋಲ್​, ಡೀಸೆಲ್​, ಅಡುಗೆ ಅನಿಲ, ವಿದ್ಯುತ್​, ದಿನಸಿ ಹಾಗೂ ಸಾರಿಗೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಸಾರ್ವಜನಿಕ ಉದ್ದಿಮೆಗಳನ್ನು ರಕ್ಷಿಸಿ ಖಾಸಗೀಕರಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ಬಳಿಕ ಹೋರಾಟಗಾರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿಮಾರ್ಣವಾಗಿದ್ದು, ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದು ಪ್ರತಿಭಟನೆಯನ್ನು ನಿಯಂತ್ರಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್​, ಜಿಲ್ಲಾಧ್ಯಕ್ಷ ಹನುಮೇಶ್​ ಕಲ್ಮಂಗಿ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್​ ಡಗ್ಗಿ, ಎಐಎಡಬ್ಲ್ಯುಯು ಜಿಲ್ಲಾಧ್ಯಕ್ಷ ಬಸವರಾಜ ಮರಕುಂಬಿ, ಜಿಲ್ಲಾ ಕಾರ್ಯದರ್ಶಿ ಸುಂಕಪ್ಪ ಗದಗ್​, ಕೆಪಿಆರ್​ಎಸ್​ ಜಿಲ್ಲಾಧ್ಯಕ್ಷ ಶ್ರೀನಿವಾಸ್​ ಹೊಸಳ್ಳಿ ಹಾಗೂ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್​ ಬೆಣಕಲ್​ ಪ್ರಮುಖರಾದ ಆರ್​ ಕೆ ದೇಸಾಯಿ, ಹುಸೇನಪ್ಪಾ ಕೆ.ಹೆಚ್​., ಗಂಗಾಧರಯ್ಯ ಸ್ವಾಮಿ, ಲಕ್ಷಿ$್ಮದೇವಿ ಸೋನಾರೆ, ಬಾಳಪ್ಪ ಹುಲಿ ಹೈದರ್​, ಶಿವಣ್ಣ ಸಿಂಗನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net