ಉದ್ಯೋಗಾಕಂಗಳ ಬಂಧನ ಖಂಡಿಸಿ ಕೊಪ್ಪಳದಲ್ಲಿ ಎಐಡಿವೈಒ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಶರಣು ಗಡ್ಡಿ, ಸುಭಾನ್ ನೀರಲಗಿ, ಮಂಗಳೇಶ ರಾಠೋಡ್, ಕನಕರಾಯ ಬಸಾಪುರ, ವಿರುಪಾ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೊಪ್ಪಳದಲ್ಲಿ ಎಐಡಿವೈಒ ಪದಾಧಿಕಾರಿಗಳ ಆಗ್ರಹ
ಹೋರಾಟಗಾರರ ಬಿಡುಗಡೆ ಆಗಲಿ
ಕೊಪ್ಪಳ: ಧಾರವಾಡದಲ್ಲಿ ಉದ್ಯೋಗ ಅರಸಿ ಪ್ರತಿಭಟಿಸಿದವರನ್ನು ಬಂಧಿಸಿದ್ದು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಎಐಡಿವೈಒ ಪದಾಧಿಕಾರಿಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಉದ್ಯೋಗ ಕೊಡುವಲ್ಲಿ ಸರ್ಕಾರ ವಿಲವಾಗಿದೆ. ಇದೀಗ ಹೋರಾಟ ಹತ್ತಿಕ್ಕಲು ಮುಂದಾಗಿದೆ. ಹೋರಾಟಕ್ಕೆ ಸಿದ್ಧವಾಗುತ್ತಿದ್ದವರನ್ನು ಬಂಧಿಸುತ್ತಿದೆ. ಈ ಮೂಲಕ ಜನ ವಿರೋಧಿ ಆಡಳಿತ ನಡೆಸುತ್ತಿದೆ. ಯಾವುದೇ ನೋಟಿಸ್ ನೀಡದೇ ಏಕಾಏಕಿ ಬಂಧಿಸುವುದು ಯಾವ ನ್ಯಾಯ ? ಕಾಂಗ್ರೆಸ್ ಆಡಳಿತದಲ್ಲಿ ಪ್ರತಿಭಟಿಸುವ ಹಕ್ಕನ್ನು ಕಿತ್ತುಕೊಳ್ಳುತ್ತಿರುವುದು ವಿಷಾದನೀಯ. ಹಲವು ದಿನಗಳಿಂದ ಸಿಎಂ ಭೇಟಿಗೆ ಮನವಿ ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದರೂ ಸ್ಪಂದಿಸುವ ಸೌಜನ್ಯ ತೋರುತ್ತಿಲ್ಲ. ಯುವಕರ ಮತ ಪಡೆದು ಉದ್ಯೋಗ ನೀಡಿ ಎಂದಾಗ ಹತ್ತಿಕ್ಕುತ್ತಿರುವುದು ಅನ್ಯಾಯ. ಒಳ ಮೀಸಲು ಕುಂಟು ನೆಪ ಇಟ್ಟುಕೊಂಡು ನೇಮಕಾತಿ ಮುಂದೂಡುತ್ತಿದೆ. ದಮನಕಾರಿ ನೀತಿಗೆ ಬೆದರುವುದಿಲ್ಲ. ಹೋರಾಟ ಮುಂದುವರೆಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಿಡಿ ಕಾರಿದರು.
ವಶಕ್ಕೆ ಪಡೆದ ಎಲ್ಲ ಉದ್ಯೋಗಾಕಾಂಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ದಬ್ಬಾಳಿಕೆ ನೀತಿ ಕೈ ಬಿಡಬೇಕು. ಸಾಂವಿಧಾನಾತ್ಮಕ ಹಕ್ಕಗಳನ್ನು ಮೊಟಕುಗೊಳಿಸುವ ಕ್ರಮ ಕೈ ಬಿಡಬೇಕು. ಹೋರಾಟಗಾರರ ಪರ ರಾಜ್ಯದ ಜನತೆ ಇದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅನಾಹುತಗಳಾದಲ್ಲಿ ಸರ್ಕಾರವೇ ಹೊಣೆ ಆಗಲಿದೆ. ತಕ್ಷಣ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ಆಗ್ರಹಿಸಿದರು.