ಉದ್ಯೋಗ ಭದ್ರತೆ ಒದಗಿಸುವಂತೆ ರಾಜ್ಯ ಹಮಾಲಿ ಕಾರ್ಮಿಕರ ೆಡರೇಷನ್ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಎಪಿಎಂಸಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು. ೆಡರೇಷನ್ ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣನಾಯಕ,ಪದಾಧಿಕಾರಿಗಳಾದ ಮಂಜುನಾಥ ನಾಯಕ, ಶ್ರೀಶೈಲಪ್ಪ, ಬಸಪ್ಪ, ಬಂಡಿ ರಾಜಾಸಾಬ್ ಇತರರಿದ್ದರು.
ಗಂಗಾವತಿ: ಉದ್ಯೋಗ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ರಾಜ್ಯ ಹಮಾಲಿ ಕಾರ್ಮಿಕರ ೆಡರೇಷನ್ ತಾಲೂಕು ಸಮಿತಿ ಸದಸ್ಯರು ನಗರದ ಎಪಿಎಂಸಿ ಕಚೇರಿ ಮುಂದೆ ಬುಧವಾರ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಎಪಿಎಂಸಿ ಕಾರ್ಯದರ್ಶಿ ಯಮನೂರಪ್ಪಗೆ ಮನವಿ ಸಲ್ಲಿಸಿದರು.
ೆಡರೇಷನ್ ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣನಾಯಕ ಮಾತನಾಡಿ, ಅಸಂಘಟಿತ ಕಾರ್ಮಿಕರಲ್ಲಿ ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುವ, ವ್ಯಾಪಾರ ವಹಿವಾಟಿನಲ್ಲಿ ಹಾಗೂ ಸರಕು ಸಾಗಣಿಕೆಯಲ್ಲಿ ಮಹತ್ವದ ಪಾತ್ರವಹಿಸುವ ಹಮಾಲಿಗಳ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಲವಾಗಿವೆ. ಸಾಮಾಜಿಕ ಭದ್ರತಾ ಮಂಡಳಿಯಡಿ 85ಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರಿದ್ದರೂ, ಹಣಕಾಸಿನ ನೆರವು ನೀಡಿಲ್ಲ. ನಿವೃತ್ತ ಹಮಾಲರಿಗೆ 1 ಲಕ್ಷ ರೂ.ಇಡುಗಂಟು ೋಷಿಸಬೇಕು. ಭವಿಷ್ಯನಿಧಿ, ಪಿಂಚಣಿ ಹಾಗೂ ವಸತಿ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಉದ್ಯೋಗ, ಸಾಮಾಜಿಕ ಭದ್ರತೆಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು. ಕಾಯಕನಿಧಿ ಯೋಜನೆ, ಲೋಡಿಂಗ್, ಅನ್‌ಲೋಡಿಂಗ್ ಉದ್ಯಿಮೆಗೆ ಕನಿಷ್ಠ ವೇತನ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಮಂಜುನಾಥ ನಾಯಕ, ಶ್ರೀಶೈಲಪ್ಪ, ಬಸಪ್ಪ, ಬಂಡಿ ರಾಜಾಸಾಬ್, ಗವಿಸಿದ್ದಪ್ಪ, ಹನುಮಂತಪ್ಪ ಹಾದಿಮನಿ, ಮಹೇಶ, ವೆಂಕಟೇಶ, ಚಂದುಸಾಬ್, ರಹೀಂಸಾಬ್, ದುಲೇಸಾಬ್, ಜಾಕೀರ್‌ಸಾಬ್, ಇಮಾಮ್, ಇಂದ್ರಪ್ಪ ಸೇರಿ ಆಟೋ ಚಾಲಕರ ಮತ್ತು ಖಾಲಿ ಚೀಲ ವ್ಯಾಪಾರಿಗಳ ಸಂಘದ ಸದಸ್ಯರಿದ್ದರು.