ಮಾಸಾಶನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಅಂಗವಿಕಲರ ಹಾಗೂ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಶ್ರೀ ಬಸವೇಶ್ವರ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಸಿದರು. ಒಕ್ಕೂಟದ ತಾಲೂಕಾಧ್ಯಕ್ಷ ಬಸವರಾಜ ಗೋನಾಳ್, ಪದಾಧಿಕಾರಿಗಳಾದ ಯಲ್ಲಪ್ಪ ವಡ್ಡರಹಟ್ಟಿ, ಡಾ.ಅಶೋಕ ಡಂಬರ್, ರಾಘವೇಂದ್ರ ಸಿದ್ದಿಕೇರಿ ಇತರರಿದ್ದರು.
ಗಂಗಾವತಿ: ಮಾಸಾಶನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗವಿಕಲರ ಹಾಗೂ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀ ಬಸವೇಶ್ವರ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರ ಮತ್ತು ಗ್ರಾಮೀಣ ಭಾಗದ ಅಂಗವಿಕಲರು ಮತ್ತು ಪಾಲಕರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ತಹಸೀಲ್ದಾರ್ ಯು.ವಸಂತಕುಮಾರಿಗೆ ಸಲ್ಲಿಸಿದರು. ಒಕ್ಕೂಟದ ತಾಲೂಕಾಧ್ಯಕ್ಷ ಬಸವರಾಜ ಗೋನಾಳ್ ಮಾತನಾಡಿ, ಕಡಿಮೆ ಮಾಸಾಶನದಲ್ಲಿ ಅಂಗವಿಕಲರು ಜೀವನ ನಿರ್ವಹಿಸುವುದು ಕಷ್ಟ ಸಾಧ್ಯವಾಗಿದ್ದು, ಕಳೆದ 3 ತಿಂಗಳಿಂದ ಮಾಸಾಶನ ವಿತರಿಸಿಲ್ಲ. ಬೇರೆ ರಾಜ್ಯಗಳಲ್ಲಿ ಅಂಗವಿಕಲರ ಮಾಸಾಶನ ಹೆಚ್ಚಿಸಿದ್ದರೆ, ರಾಜ್ಯದಲ್ಲಿ ಇನ್ನೂ ಅದೇ ಮಾದರಿಯಲ್ಲಿ ವಿತರಿಸಲಾಗುತ್ತಿದೆ.
ಕೇಂದ್ರದಿಂದ 5ಸಾವಿರ ರೂ. ಮತ್ತು ರಾಜ್ಯದಿಂದ 5 ಸಾವಿರ ರೂ. ಸೇರಿ 10ಸಾವಿರ ರೂ. ಮಾಸಾಶನ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೂ ಅನುಷ್ಠಾನಗೊಂಡಿಲ್ಲ. ಅಂಗವಿಕಲರಿಗೆ ಗ್ರಾಪಂ ಮತ್ತು ನಗರಸಭೆ ವ್ಯಾಪ್ತಿಯ ಶೇ.5 ಆಶ್ರಯ ಯೋಜನೆ ಮೀಸಲಿಡುವ ಬಗ್ಗೆ ಕಾಯ್ದೆಯಿದ್ದರೂ ಅಧಿಕಾರಿಗಳು ಗಂಭೀರ ಪರಿಗಣಿಸುತ್ತಿಲ್ಲ. ಅಂಗವಿಕಲರ ವಿವಾಹ ಕಾಯ್ದೆಯಡಿ ಪ್ರೋತ್ಸಾಹಧನ 5ಲಕ್ಷ ರೂ.ಗೆ ಹೆಚ್ಚಳ, ರಾಜ್ಯಾದ್ಯಂತ ಸಂಚರಿಸಲು ಉಚಿತ ಬಸ್‌ಪಾಸ್ ವ್ಯವಸ್ಥೆ, ಉದ್ಯೋಗ, ಶಿಕ್ಷಣದಲ್ಲೂ ಮೀಸಲು, ತಾಲೂಕು ಮಟ್ಟದ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರ, ಕಚೇರಿಗಳಲ್ಲಿ ಲ್‌ಟಿ ವ್ಯವಸ್ಥೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.