ರಸ್ತೆ ಬದಿಯಲ್ಲಿ ವ್ಯಾಪಾರಿಗಳಿಗೆ ದುಡಿಮೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸಿಐಟಿಯು ತಾಲೂಕು ಸಮಿತಿ ಸದಸ್ಯರು ಗಂಗಾವತಿ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಸಮಿತಿ ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಸಿ.ಕೆ.ಮರಿಸ್ವಾಮಿ ಬರಗೂರು, ಪದಾಧಿಕಾರಿಗಳಾದ ಮಂಜುನಾಥ ಡಗ್ಗಿ, ಸೈಯದ್ ಬುರಾಹನುದ್ದೀನ್ ಇತರರಿದ್ದರು.
ಗಂಗಾವತಿ: ಬೀದಿ ಬದಿ ವ್ಯಾಪಾರಿಗಳಿಗೆ ರಸ್ತೆ ಬದಿಯಲ್ಲಿ ದುಡಿಮೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸಿಐಟಿಯು ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ, ಎಐಸಿಸಿಟಿಯು ಸಹಯೋಗದಲ್ಲಿ ಪ್ರತಿಭಟನೆ ನಡೆಸಿದರು.
ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮತ್ತು ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಸಿ.ಕೆ.ಮರಿಸ್ವಾಮಿ ಬರಗೂರು ಮಾತನಾಡಿ, ನಗರದ ುಟ್‌ಪಾತ್ ತೆರವು ನೆಪದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ನಗರಸಭೆ ಒಕ್ಕಲೆಬ್ಬಿಸಿದ್ದು, ಜೀವನೋಪಾಯ ಸಂರಕ್ಷಣೆ ಮತ್ತು ವ್ಯಾಪಾರ ನಿಯಂತ್ರಣ ಕಾಯ್ದೆ ಉಲ್ಲಂಸಲಾಗಿದೆ. ವ್ಯಾಪಾರಿಗಳ ಸರ್ವೇ ಕೈಗೊಳ್ಳದ ನಗರಸಭೆ, ಗುರುತಿನ ಚೀಟಿ ವಿತರಿಸಿಲ್ಲ. ವ್ಯಾಪಾರಿಗಳನ್ನು ಬಲವಂತವಾಗಿ ಇನ್ನೊಂದೆಡೆ ಸ್ಥಳಾಂತರಿಸುವುದು ಕಾನೂನು ಬಾಹೀರಾಗಿದ್ದು, ಪಟ್ಟಣ ವ್ಯಾಪಾರ ಸಮಿತಿ ನಿರ್ದೇಶನದಂತೆ ವ್ಯಾಪಾರಿಗಳಿಗೆ ವಹಿವಾಟು ಸ್ಥಳದಲ್ಲಿ ಮೂಲ ಸೌಲಭ್ಯ ಒದಗಿಸಬೇಕು. ವ್ಯಾಪಾರ ಸಮಿತಿ ಸಭೆ ಆಯೋಜಿಸದೇ ಏಕಾಏಕಿ ಒಕ್ಕಲೆಬ್ಬಿಸಿರುವುದು ಬಡ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೀದಿ ಬದಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿದರು.
ವಿವಿಧ ಸಂಘಟನೆ ಪದಾಧಿಕಾರಿಗಳಾದ ವಿಜಯ ದೊರೆರಾಜು, ಮಂಜುನಾಥ ಡಗ್ಗಿ, ಸೈಯದ್ ಬುರಾಹನುದ್ದೀನ್, ಮಹ್ಮದ್ ಶಫಿ, ಎಂ.ಯಲ್ಲಪ್ಪ, ರಾಘವೇಂದ್ರ ಭೋವಿ, ಕೆ.ಗವಿಸಿದ್ದಪ್ಪ, ನವೀನ್ ಹೂಗಾರ್, ಎ.ಶಿವಕುಮಾರ, ರಮೇಶ ಇತರರಿದ್ದರು.