ಹಾಸ್ಟೆಲ್ ವಿದ್ಯಾರ್ಥಿಗಳಿಗೂ ತಟ್ಟಿದ ಬಿಸಿ

 ಗಂಗಾವತಿ ವಿರುಪಾಪುರದ ಬಿಸಿಎಂ ಬಾಲಕರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಹಾರ ವಿತರಿಸದ ಸಿಬ್ಬಂದಿ ಕ್ರಮ ಖಂಡಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ವ್ಯವಸ್ಥಾಪಕ ನಿಜಾಮುದ್ದೀನ್‌ಗೆ ಗುರುವಾರ ಮನವಿ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕಾಧ್ಯಕ್ಷ ಯು.ನಾಗರಾಜ, ಪದಾಧಿಕಾರಿಗಳಾದ ಬಸಯ್ಯ ಹಿರೇಮಠ, ಬಾದ್ನಟ್ಟಿ ಶರಣಬಸವ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಮಯಕ್ಕೆ ಊಟ ಕೊಡದ ನಿಲಯ ಪಾಲಕರ ವಿರುದ್ಧ ಆಕ್ರೋಶ
ಗಂಗಾವತಿ: ನಗರದ ವಿರುಪಾಪುರದ ಬಿಸಿಎಂ ಬಾಲಕರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಹಾರ ವಿತರಿಸದ ಸಿಬ್ಬಂದಿ ಕ್ರಮ ಖಂಡಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ತಾಪಂ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಸಿಲಿಂಡರ್ ನೆಪ ಹೇಳಿ ಸಂಜೆ 4ಗಂಟೆಯಾದರೂ ಅಡುಗೆ ಸಿದ್ಧಪಡಿಸದ ನಿಲಯ ಪಾಲಕರ ವಿರುದ್ಧ ವಿದ್ಯಾರ್ಥಿಗಳು ಮತ್ತು ಎಸ್‌ಎ್ಐ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿ ವ್ಯವಸ್ಥಾಪಕ ಎಸ್.ನಿಜಾಮುದ್ದೀನ್‌ಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, ಸಿಲಿಂಡರ್ ಕೊರತೆ ನೆಪದಲ್ಲಿ ವಿದ್ಯಾರ್ಥಿಗಳಿಗೆ ಆಹಾರ ನೀಡುವಲ್ಲಿ ಹಾಸ್ಟೆಲ್ ಸಿಬ್ಬಂದಿ ನಿರ್ಲಕ್ಷಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಇಲಾಖೆಯಲ್ಲಿ ಅವಕಾಶವಿದ್ದರೂ, ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಸಂಜೆ 4 ಗಂಟೆಯಾದರೂ ಆಹಾರ ನೀಡದೇ ಉಪವಾಸ ಹಾಕಿದ್ದಾರೆ. ಹಾಸ್ಟೆಲ್‌ನಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದರೂ ವಾರ್ಡನ್ ಮತ್ತು ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿಲ್ಲವೆಂದು ದೂರಿದರು.
ಪ್ರತಿಭಟನೆ ಮಾಹಿತಿ ಅರಿತ ಇಒ ರಾಮರೆಡ್ಡಿ ಪಾಟೀಲ್, ಪರ್ಯಾಯ ವ್ಯವಸ್ಥೆ ಕಲ್ಪಿಸಿದರು. ತಾಲೂಕಾಧ್ಯಕ್ಷ ಯು.ನಾಗರಾಜ, ಪದಾಧಿಕಾರಿಗಳಾದ ಬಸಯ್ಯ ಹಿರೇಮಠ, ಬಾದ್ನಟ್ಟಿ ಶರಣಬಸವ, ಬಿ.ಮೌನೇಶ, ಮಲ್ಲಿಕಾರ್ಜುನ ಉತ್ತನೂರ್, ಕೌಶಿಕ್, ಮಂಜು ಚಿಕ್ಕಮಾದಿನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net