ಕೂಲಿಕಾರರಿಗೆ ಕೆಲಸ ನೀಡಿ ಗುಳೆ ತಪ್ಪಿಸಿ

ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ಗಂಗಾವತಿ ತಾಲೂಕಿನ ಢಣಾಪುರ ಗ್ರಾಪಂ ಪಿಡಿಒ ಮನೋರಮಾಗೆ ಮಗಳವಾರ ಮನವಿ ಸಲ್ಲಿಸಿದರು. ತಾಲೂಕಾಧ್ಯಕ್ಷ ಶ್ರೀನಿವಾಸ ಹೊಸಳ್ಳಿ, ಕಾರ್ಯದರ್ಶಿ ಮುತ್ತಣ್ಣ ದಾಸನಾಳ್, ಪದಾಧಿಕಾರಿಗಳಾದ ಬಸವರಾಜ ಆನೆಗೊಂದಿ, ಹನುಮಂತ ಹೆಬ್ಬಾಳ, ಆಂಜನೇಯ, ಶಾರದಮ್ಮ, ಲಕ್ಷ್ಮೀ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಮನವಿ
ಗಂಗಾವತಿ: ನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ಢಣಾಪುರ, ಹೆಬ್ಬಾಳ ಕೂಲಿಕಾರರೊಂದಿಗೆ ತಾಲೂಕಿನ ಢಣಾಪುರ ಗ್ರಾಪಂ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಪಿಡಿಒ ಮನೋರಮಾಗೆ ಮನವಿ ಸಲ್ಲಿಸಿದರು.
ತಾಲೂಕು ಸಮಿತಿ ಕಾರ್ಯದರ್ಶಿ ಮುತ್ತಣ್ಣ ದಾಸನಾಳ್ ಮಾತನಾಡಿ, ಕೆಲಸಕ್ಕಾಗಿ ಅರ್ಜಿ ನಮೂನೆ ನೀಡಿ 2 ತಿಂಗಳಾದರೂ ಇದುವರೆಗೆ ಕಾಮಗಾರಿಯ ಕ್ರಿಯಾಯೋಜನೆ ರೂಪಿಸಿಲ್ಲ, ಕೆಲಸ ಕೊಟ್ಟಿಲ್ಲ. ಕೃಷಿ ಚಟುವಟಿಕೆಗಳು ಸ್ಥಗಿತ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ದುಡಿಮೆಯಿಲ್ಲದಂತಾಗಿದ್ದು, ಗುಳೆ ಹೋಗುವ ಸ್ಥಿತಿ ಬಂದಿದೆ. ಬಡ ಮತ್ತು ಶೋಷಿತ ಸಮುದಾಯದವರ ಅನುಕೂಲಕ್ಕಾಗಿ ರೂಪಗೊಂಡ ನರೇಗಾ ಯೋಜನೆ ಸಮರ್ಪಕ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಶ್ರೀನಿವಾಸ ಹೊಸಳ್ಳಿ, ಪದಾಧಿಕಾರಿಗಳಾದ ಬಸವರಾಜ ಆನೆಗೊಂದಿ, ಹನುಮಂತ ಹೆಬ್ಬಾಳ, ಆಂಜನೇಯ, ಶಾರದಮ್ಮ, ಲಕ್ಷ್ಮೀ, ಗಂಗಮ್ಮ, ಕೀರಮ್ಮ, ದುರುಗಮ್ಮ, ಕೀರಪ್ಪ, ಪಂಪಾಪತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net