ಜೂಜಾಟ ನಿಲ್ಲುವವರೆಗೂ ಹೋರಾಟ

ಮದ್ಯ, ಮಟ್ಕಾ ಮತ್ತು ಇಸ್ಪೀಟ್ ಜೂಜಾಟ ನಿಯಂತ್ರಿಸುವಂತೆ ಒತ್ತಾಯಿಸಿ ಢಣಾಪುರ ಗ್ರಾಮಸ್ಥರು ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್‌ಗೆ ಬುಧವಾರ ಸಲ್ಲಿಸಿದರು. ಪ್ರಮುಖರಾದ ಬಿ.ಕೀರಪ್ಪ, ಈ.ಚಿದಾನಂದಪ್ಪ, ಪಿ.ಅಯ್ಯಪ್ಪ, ನಿಂಗಪ್ಪ ಇತರರಿದ್ದರು.
ಮದ್ಯ, ಮಟ್ಕಾ ಮತ್ತು ಇಸ್ಪೀಟ್ ಜೂಜಾಟ ನಿಯಂತ್ರಿಸುವಂತೆ ಒತ್ತಾಯಿಸಿ ಢಣಾಪುರ ಗ್ರಾಮಸ್ಥರು ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್‌ಗೆ ಬುಧವಾರ ಸಲ್ಲಿಸಿದರು. ಪ್ರಮುಖರಾದ ಬಿ.ಕೀರಪ್ಪ, ಈ.ಚಿದಾನಂದಪ್ಪ, ಪಿ.ಅಯ್ಯಪ್ಪ, ನಿಂಗಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಢಣಾಪುರ ಗ್ರಾಮಸ್ಥರ ಎಚ್ಚರಿಕೆ
ಗಂಗಾವತಿ: ತಾಲೂಕಿನ ಢಣಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ, ಮಟ್ಕಾ ಮತ್ತು ಇಸ್ಪೀಟ್ ಜೂಜಾಟ ನಿಯಂತ್ರಿಸುವಂತೆ ಒತ್ತಾಯಿಸಿ ಢಣಾಪುರ ಗ್ರಾಮಸ್ಥರು ಗ್ರಾಪಂ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಪಂ ವ್ಯಾಪ್ತಿಯ ಢಣಾಪುರ, ಹೆಬ್ಬಾಳ, ಹೆಬ್ಬಾಳ ಕ್ಯಾಂಪ್‌ನಲ್ಲಿ ಮದ್ಯ, ಮಟ್ಕಾ ಮತ್ತು ಇಸ್ಪೀಟ್ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಗ್ರಾಮಸ್ಥರು ಜ.14ರಂದು ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದಿದ್ದರಿಂದ ಜ.27ರಂದು ಗ್ರಾಪಂಯಿಂದ ತಾಲೂಕಾಡಳಿತ ಸೌಧದವರೆಗೆ ಪಾದಯಾತ್ರೆ ಕೈಗೊಳ್ಳುವ ಬಗ್ಗೆ ಸಭೆ ನಡೆಸಿದ್ದರು. ಅದರಂತೆ ಪಾದಯಾತ್ರೆಗಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ನಿಯಂತ್ರಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಗ್ರಾಮಸ್ಥರಿಗೆ ಭರವಸೆ ನೀಡಿದ್ದರಿಂದ ಬೇಡಿಕೆ ಮನವಿಯನ್ನು ಸಲ್ಲಿಸಿ ಪಾದಯಾತ್ರೆ ಹಿಂಪಡೆದರು.
ಪೊಲೀಸರು ಅಕ್ರಮ ಚಟುವಟಿಕೆಗಳ ನಿಯಂತ್ರಣ ಭರವಸೆ ನೀಡಿದ್ದರಿಂದ ಪಾದಯಾತ್ರೆ ಕೈಬಿಟ್ಟಿದ್ದು, ನಿಯಂತ್ರಣವಾಗುವರೆಗೂ ಹೋರಾಟ ನಿಲ್ಲಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದರು. ಪ್ರಮುಖರಾದ ಬಿ.ಕ್ಕೀರಪ್ಪ, ಈ.ಚಿದಾನಂದಪ್ಪ, ಪಿ.ಅಯ್ಯಪ್ಪ, ನಿಂಗಪ್ಪ, ಸಿ.ಎಚ್. ಮಲ್ಲನಗೌಡ, ವೀರೇಶ, ಕೃಷ್ಣಪ್ಪ ಬಾಗೋಡಿ, ಟಿ.ಶಿವಕುಮಾರ, ರಾಘವೇಂದ್ರ, ತಿಪ್ಪಣ್ಣ, ಹೊನ್ನೂರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net