ಭಾವಿ ಶಿಕ್ಷಕರು ಕ್ರಿಯಾಶೀಲತೆ ರೂಢಿಸಿಕೊಳ್ಳಲಿ

ಗಂಗಾವತಿ ಟಿಎಂಎಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಿಜ್ಞಾನ ಮತ್ತು ಗಣಿತ ಕ್ಲಬ್‌ನ್ನು ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ ಉದ್ಘಾಟಿಸಿದರು. ಗಣಿತ ವಿಭಾಗದ ಮುಖ್ಯಸ್ಥ ಕೆ.ಎಂ.ಶಿವಪ್ರಕಾಶ, ಸಹ ಪ್ರಾಧ್ಯಾಪಕರಾದ ಎಚ್.ಎಂ.ವಿರೂಪಾಕ್ಷಸ್ವಾಮಿ, ಡಾ.ಅರುಣಕುಮಾರ, ಡಾ.ರಮೇಶ ಸಿದ್ದಪ್ಪ ಇತರರಿದ್ದರು.
ಗಂಗಾವತಿ ಟಿಎಂಎಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಿಜ್ಞಾನ ಮತ್ತು ಗಣಿತ ಕ್ಲಬ್‌ನ್ನು ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ ಉದ್ಘಾಟಿಸಿದರು. ಗಣಿತ ವಿಭಾಗದ ಮುಖ್ಯಸ್ಥ ಕೆ.ಎಂ.ಶಿವಪ್ರಕಾಶ, ಸಹ ಪ್ರಾಧ್ಯಾಪಕರಾದ ಎಚ್.ಎಂ.ವಿರೂಪಾಕ್ಷಸ್ವಾಮಿ, ಡಾ.ಅರುಣಕುಮಾರ, ಡಾ.ರಮೇಶ ಸಿದ್ದಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ ಸಲಹೆ
  • ಗಂಗಾವತಿ ವಿಜ್ಞಾನ ಗಣಿತ ಕ್ಲಬ್ ಉದ್ಘಾಟನೆ
ಗಂಗಾವತಿ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಜವಾಬ್ದಾರಿ ಭಾವಿ ಶಿಕ್ಷಕರ ಮೇಲಿದ್ದು, ಆವಿಷ್ಕಾರಗಳಿಗೆ ಪ್ರೇರಣೆ ನೀಡುವಂತೆ ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ ಹೇಳಿದರು.
ನಗರದ ಟಿಎಂಎಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ಗಣಿತ ಕ್ಲಬ್ ಉದ್ಘಾಟಿಸಿ ಮಾತನಾಡಿದರು. ಕಲಿಕೆಯ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವುದರ ಜತೆಗೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವತ್ತ ಕ್ರಿಯಾಶೀಲತೆ ರೂಢಿಸಿಕೊಳ್ಳಲು ಸಲಹೆ ನೀಡಿದರು.
ಗಣಿತ ವಿಭಾಗದ ಮುಖ್ಯಸ್ಥ ಕೆ.ಎಂ.ಶಿವಪ್ರಕಾಶ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಗಣಿತ ಎಲ್ಲ ರಂಗಗಳಲ್ಲಿ ಹಾಸು ಹೊಕ್ಕಾಗಿದ್ದು, ತರ್ಕದ ರೂಪದಲ್ಲಿ ಬಳಸುವುದು ಪ್ರತಿಯೊಬ್ಬ ಭಾವಿ ಶಿಕ್ಷಕರ ಗುರಿಯಾಗಿರಲಿ ಎಂದರು.
ನಂತರ ಪ್ರತಿಜ್ಞಾ ವಿಧಿ ಬೋಧಿಸಿ, ಗಣಿತ ಕಲಿಕೆ ಮಹತ್ವ ಮತ್ತು ದೈನಂದಿನ ಜೀವನದಲ್ಲಿ ಗಣಿತದ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನ ವೈಭವ ಮತ್ತು ಗಣಿತ ಗಮ್ಮತ್ತು ಪರಿಕಲ್ಪನೆಯಡಿಯಲ್ಲಿ ಪ್ರಶಿಕ್ಷಣಾರ್ಥಿಗಳು ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಸಹ ಪ್ರಾಧ್ಯಾಪಕರಾದ ಎಚ್.ಎಂ.ವಿರೂಪಾಕ್ಷಸ್ವಾಮಿ, ಡಾ.ಅರುಣಕುಮಾರ, ಡಾ.ರಮೇಶ ಸಿದ್ದಪ್ಪ, ಜಯರಾಂ ಮರಡಿತೋಟ, ಎಂ.ರುದ್ರೇಶ ಆರಾಳ್, ಶಿವರಾಜ ಪಾಟೀಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net