ಪರೀಕ್ಷೆ ಯಶಸ್ವಿಗೊಳಿಸಲು ಸೂಕ್ತ ಬಂದೋಬಸ್ತ್

ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜನ್ನು  ಪೊಲೀಸ್ ಅಧಿಕಾರಿಗಳ ತಂಡ ಪರಿಶೀಲಿಸಿತು. ಪಿಐಗಳಾದ ರಂಗಪ್ಪ ಎಚ್.ದೊಡ್ಮನಿ, ರಂಗನಾಥ, ಪ್ರಾಂಶುಪಾಲ ಡಾ.ಶಿವರಾಜ ಗುರಿಕಾರ್ ಇತರರಿದ್ದರು.
ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜನ್ನು ಪೊಲೀಸ್ ಅಧಿಕಾರಿಗಳ ತಂಡ ಪರಿಶೀಲಿಸಿತು. ಪಿಐಗಳಾದ ರಂಗಪ್ಪ ಎಚ್.ದೊಡ್ಮನಿ, ರಂಗನಾಥ, ಪ್ರಾಂಶುಪಾಲ ಡಾ.ಶಿವರಾಜ ಗುರಿಕಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮೀಣ
  • ಪಿಐ
  • ಹೇಳಿಕೆ
ಗಂಗಾವತಿ: ಪೊಲೀಸ್ ಕಾನ್‌ಸ್ಟೇಬಲ್ ನೇಮಕಕ್ಕಾಗಿ ನಡೆಯಲಿರುವ ಲಿಖಿತ ಪರೀಕ್ಷೆಗಾಗಿ ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜನ್ನು ಪೊಲೀಸ್ ಅಧಿಕಾರಿಗಳ ತಂಡ ಸೋಮವಾರ ಪರಿಶೀಲಿಸಿತು.
ಆ.2ರಂದು ನೇಮಕ ಪರೀಕ್ಷೆ ಜಿಲ್ಲೆಯಾದ್ಯಂತ ಆಯೋಜಿಸಲಾಗಿದ್ದು, ಪ್ರಮುಖವಾಗಿ ನಗರದ ಕಾಲೇಜಿನ 10 ಕೊಠಡಿಗಳಲ್ಲಿ ಪರೀಕ್ಷೆ ಜರುಗಲಿದೆ. ಪಾರದರ್ಶಕ ಮತ್ತು ಬಂದೋಬಸ್ತ್‌ನಲ್ಲಿ ನಡೆಯಬೇಕಿರುವ ಹಿನ್ನೆಲೆಯಲ್ಲಿ ಕಾಲೇಜಿನ ಕಟ್ಟಡ, ಮೈದಾನ ಮತ್ತು ಕೊಠಡಿಗಳನ್ನು ಅಧಿಕಾರಿಗಳ ತಂಡ ಪರಿಶೀಲಿಸಿತು.
ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಬಂದೋಬಸ್ತ್, ಮೇಲ್ವಿಚಾರಕರ ನಿಯೋಜನೆ, ಶುದ್ಧ ಕುಡಿವ ನೀರಿನ ವ್ಯವಸ್ಥೆ ಕೈಗೊಳ್ಳಲು ಕಾಲೇಜು ಮುಖ್ಯಸ್ಥರಿಗೆ ಸೂಚಿಸಲಾಯಿತು. ಪರೀಕ್ಷಾ ಕೇಂದ್ರದ 100 ಮೀ.ವ್ಯಾಪ್ತಿಯಲ್ಲಿ ಕಂಪ್ಯೂಟರ್ ಕೇಂದ್ರ, ಜಿರಾಕ್ಸ್ ಅಂಗಡಿ ಸೇರಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಪೊಲೀಸರಿಗೆ ಸೂಚಿಸಲಾಯಿತು.
ಗ್ರಾಮೀಣ ಪಿಐ ರಂಗಪ್ಪ ಎಚ್.ದೊಡ್ಮನಿ ಮಾತನಾಡಿ, ಕಾನ್‌ಸ್ಟೇಬಲ್ ನೇಮಕಕ್ಕಾಗಿ ಪರೀಕ್ಷೆ ಆಯೋಜಿಸಿದ್ದು, ಸೂಕ್ತ ಬಂದೋಬಸ್ತ್ ಜತೆಗೆ ಪಾರದರ್ಶಕತೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಪೊಲೀಸ್ ಇಲಾಖೆ ಮತ್ತು ಕಾಲೇಜು ಸಿಬ್ಬಂದಿ ಸಮನ್ವಯತೆಯೊಂದಿಗೆ ಪರೀಕ್ಷೆ ಯಶಸ್ವಿಗೊಳಿಸಲಾಗುವುದು ಎಂದರು. ಪರೀಕ್ಷೆ ಮೇಲ್ವಿಚಾರಣೆ ಅಧಿಕಾರಿ ಹಾಗೂ ಪಿಐ ರಂಗನಾಥ, ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net