ಗೃಹಲಕ್ಷಿ$್ಮಯಡಿ 3,21,019 ಫಲಾನುಭವಿಗಳಿಗೆ ೆಬ್ರವರಿವರೆಗೆ ಹಣ ಸಂದಾಯವಾಗಿದೆ. ಗೃಹಜ್ಯೋತಿಯಡಿ ಮಾರ್ಚ್ ಅಂತ್ಯಕ್ಕೆ 2,89,212 ಗ್ರಾಹಕರಿಗೆ ಸೌಲಭ್ಯ ದೊರೆತಿದೆ. 3,63,521 ಪಡಿತರ ಕಾರ್ಡ್ಗಳಿದ್ದು, ಏಪ್ರೀಲ್ವರೆಗೆ 12,393 ಮೆ.ಟನ್ ಪಡಿತರ ಹಂಚಿಕೆ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಮಾರ್ಚ್-ವರೆಗೆ 34,84,433 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಯುವನಿಧಿಯಡಿ ಜನೆವರಿವರೆಗೆ 14,266 ಫಲಾನುಭವಿಗಳು ನೋಂದಣಿಯಾಗಿದ್ದು, 30.32 ಕೋಟಿ ರೂ.ಪಾವತಿಯಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.