ಕೊಪ್ಪಳ ಜಿಲ್ಲಾದ್ಯಂತ ಅನಧಿಕೃತವಾಗಿ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್, ನಸಿರ್ಂಗ್ ಹೋಮ್ ಹಾಗೂ ಲ್ಯಾಬ್‌ಗಳನ್ನು ತಕ್ಷಣ ಮುಚ್ಚಿಸಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ ಆದೇಶಿಸಿದ್ದರು. ಅಲ್ಲದೇ ಹುಲಿಗಿ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಅಧಿಕೃತ ನೋಂದಣಿ ಇಲ್ಲದೆ ಕ್ಲಿನಿಕ್ ಮತ್ತು ಲ್ಯಾಬ್‌ಗಳನ್ನು ನಡೆಸುತ್ತಾ, ಸಾರ್ವಜನಿಕರ ಜೀವದ ಜತೆ ಚೆಲ್ಲಾಟ ಆಡುತ್ತಿರುವುದು ಬೆಳಕಿಗೆ ಬಂದಿತ್ತು.