ಕಾರಾಗೃಹ ವ್ಯಕ್ತಿತ್ವ ಪರಿವರ್ತನೆ ಕೇಂದ್ರ

ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ಆಯೋಜಿಸಿದ್ದ ಜೈಲು ಹಕ್ಕಿಗಳೊಂದಿಗೆ ಬಯಲು ಹಕ್ಕಿಗಳ ಜಾನಪದ ಕಲರವ ಕಾರ್ಯಕ್ರಮವನ್ನು ನ್ಯಾಯಾಧೀಶ ಮಹಾಂತೇಶ ಎಸ್. ದರಗದ ತಂಬೂರಿ ಬಾರಿಸಿ ಉದ್ಘಾಟಿಸಿದರು. ಅಕಾಡೆಮಿ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್, ಜಿಲ್ಲಾ ಕಾರಾಗೃಹ ಅಧೀಕ್ಷಕ ಅಂಬರೀಷ್ ಎಸ್. ಪೂಜಾರಿ, ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ ಇತರರಿದ್ದರು.
ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ಆಯೋಜಿಸಿದ್ದ ಜೈಲು ಹಕ್ಕಿಗಳೊಂದಿಗೆ ಬಯಲು ಹಕ್ಕಿಗಳ ಜಾನಪದ ಕಲರವ ಕಾರ್ಯಕ್ರಮವನ್ನು ನ್ಯಾಯಾಧೀಶ ಮಹಾಂತೇಶ ಎಸ್. ದರಗದ ತಂಬೂರಿ ಬಾರಿಸಿ ಉದ್ಘಾಟಿಸಿದರು. ಅಕಾಡೆಮಿ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್, ಜಿಲ್ಲಾ ಕಾರಾಗೃಹ ಅಧೀಕ್ಷಕ ಅಂಬರೀಷ್ ಎಸ್. ಪೂಜಾರಿ, ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ
  • ಅಭಿಮತ
  • ಜೈಲಿನಲ್ಲಿ

ಕೊಪ್ಪಳ:

ಕಾರಾಗೃಹದ ಮೂಲ ಉದ್ದೇಶ ಕೈದಿಗಳಿಗೆ ಶಿಕ್ಷೆ ನೀಡುವುದಲ್ಲ, ಅವರ ಮನಪರಿವರ್ತನೆ ವಾಡಿ ಉತ್ತಮರನ್ನಾಗಿ ರೂಪಿಸಿ ಸವಾಜಕ್ಕೆ ಮರಳಿ ಕಳಿಸುವುದಾಗಿದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್.ದರಗದ್ ಹೇಳಿದರು.

ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಕರ್ನಾಟಕ ಜಾನಪದ ಅಕಾಡೆಮಿಯಿಂದ ಆಯೋಜಿಸಿದ್ದ ಜೈಲು ಹಕ್ಕಿಗಳೊಂದಿಗೆ ಬಯಲು ಹಕ್ಕಿಗಳ ಜಾನಪದ ಕಲರವ ಕಾರ್ಯಕ್ರಮದಲ್ಲಿ ವಾತನಾಡಿದರು. ಕಾರಾಗೃಹದಲ್ಲಿದ್ದಾಗ ಪರಿವರ್ತನೆ ಹೊಂದಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಸಹಾಯ ಬೇಕಾದರೆ ತಿಳಿಸಬೇಕು. ನಿಮ್ಮ ಕಾರಣಕ್ಕೆ ಕುಟುಂಬದವರು ಸಮಸ್ಯೆ ಎದುರಿಸುತ್ತಿದ್ದರೆ ಗಮನಕ್ಕೆ ತಂದರೆ ಪರಿಹರಿಸಲಾಗುವುದು ಎಂದರು.
ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ವಾತನಾಡಿ, ಮನದೊಳಗೆ ವೇದನೆ ಕಂಡವರು ವಾತ್ರ ಜನಪದರಾಗಿ ಜನಪರವಾಗಿ ಬದುಕಲು ಸಾಧ್ಯ. ಪರಿವರ್ತನೆ ಹಾಗೂ ಪರಿಶ್ರಮ ಬದುಕು ಬದಲಿಸುತ್ತದೆ. ಆಲೋಚನೆಗಳು ನಿಂತ ನೀರಾಗಬಾರದು. ಸಂಪತ್ತು ಕಲ್ಪಿಸುವ ಸಂಕಲ್ಪಕ್ಕಿಂತ ಆರೋಗ್ಯವೇ ಸಂಪತ್ತು ಎನ್ನುವ ಸತ್ಯ ತಿಳಿದುಕೊಳ್ಳಬೇಕು. ನಮಗೆ ಗೊತ್ತಿಲ್ಲದೆ ನಾವು ಬಂಧನದಲ್ಲಿ ಇರುತ್ತೇವೆ. ಆ ಬಂಧನದಿಂದ ಹೊರಬಂದು ಸವಾಜಮುಖಿಯಾಗಿ ಬದುಕಬೇಕು ಎಂದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಅಂಬರೀಷ್ ಎಸ್. ಪೂಜಾರಿ ವಾತನಾಡಿ, ಕಾರಾಗೃಹ ಕೈದಿಗಳನ್ನು ಬಂಧಿಸಿಡುವ ಸ್ಥಳವಲ್ಲ. ಸವಾಜದಲ್ಲಿ ತಪ್ಪು ದಾರಿಗೆ ಹೋದವರನ್ನು ತಿದ್ದಿ, ಅವರಲ್ಲಿ ಉತ್ತಮ ಬದಲಾವಣೆ ತಂದು ಸವಾಜದ ಮುಖ್ಯವಾಹಿನಿಗೆ ಸೇರಿಸುವ ಕೇಂದ್ರವಾಗಿದೆ ಎಂದರು.
ಅಕಾಡೆಮಿ ಸದಸ್ಯ ಜೀವನ್‌ಸಾಬ್ ವಾಲೀಕಾರ, ವಿಜಯಕುವಾರ, ಶಂಕ್ರಪ್ಪ, ಮಹಾದೇವ, ಮಹೆಬೂಬ ಕಿಲ್ಲೇದಾರ, ಸಿದ್ದಯ್ಯ ಪುರಾಣಿಕ ಟ್ರಸ್ಟ್‌ನ ರಮೇಶ ಬನ್ನಿಕೊಪ್ಪ, ಪ್ರಮುಖರಾದ ಶರಣಪ್ಪಗೌಡರ, ಜಾನ್ ಪಾಷಾ ಕಿಲ್ಲೇದಾರ್, ಡಾ. ಮಹಾಂತೇಶ ಮಲ್ಲನಗೌಡ್ರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net