ಸಮಾಜಮುಖಿ ಕಾರ್ಯಕ್ರಮಗಳಿಗೆ ಆದ್ಯತೆ

ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ಆರ್ಯವೈಶ್ಯ ಯುವಜನ ಸಂಘ ಮತ್ತು ವಾಸವಿ ಮಹಿಳಾ ಮಂಡಳಿಯಿಂದ ಹಮ್ಮಿಕೊಂಡ ಶ್ರೀ ಕನ್ಯಕಾಪರಮೇಶ್ವರಿ ಜಯಂತ್ಯುತ್ಸವ ನಿಮಿತ್ತ ಮಾರ್ಗಸೂಚಿ ನಾಮಲಕ ಅನಾವರಣಗೊಳಿಸಲಾಯಿತು. ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್, ಸಮಾಜದ ಪ್ರಮುಖರಾದ ಸತ್ಯನಾರಾಯಣ ಶ್ರೇಷ್ಠಿ, ಸುರೇಬಾನ್, ಸಂತೋಷ ಕುಮಾರ, ಹನುಮೇಶ ಶ್ರೇಷ್ಠಿ, ಕೆ. ಬಾಲಗುರು ಶ್ರೇಷ್ಠಿ ಇತರರಿದ್ದರು.
ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ಆರ್ಯವೈಶ್ಯ ಯುವಜನ ಸಂಘ ಮತ್ತು ವಾಸವಿ ಮಹಿಳಾ ಮಂಡಳಿಯಿಂದ ಹಮ್ಮಿಕೊಂಡ ಶ್ರೀ ಕನ್ಯಕಾಪರಮೇಶ್ವರಿ ಜಯಂತ್ಯುತ್ಸವ ನಿಮಿತ್ತ ಮಾರ್ಗಸೂಚಿ ನಾಮಲಕ ಅನಾವರಣಗೊಳಿಸಲಾಯಿತು. ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್, ಸಮಾಜದ ಪ್ರಮುಖರಾದ ಸತ್ಯನಾರಾಯಣ ಶ್ರೇಷ್ಠಿ, ಸುರೇಬಾನ್, ಸಂತೋಷ ಕುಮಾರ, ಹನುಮೇಶ ಶ್ರೇಷ್ಠಿ, ಕೆ. ಬಾಲಗುರು ಶ್ರೇಷ್ಠಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಯಂತಿ
  • ಆಚರಣೆ
  • ನಗರೇಶ್ವರ
ಗಂಗಾವತಿ: ನಗರದ ಶ್ರೀ ನಗರೇಶ್ವರ ದೇವಾಲಯದಲ್ಲಿ ಆರ್ಯ ವೈಶ್ಯ ಸಮಾಜದಿಂದ ಶ್ರೀ ಕನ್ಯಕಾಪರಮೇಶ್ವರಿ ಜಯಂತ್ಯುತ್ಸವ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಕೋಟೆ ಆಂಜನೇಯ ದೇವಾಲಯದಿಂದ ನಗರೇಶ್ವರ ದೇವಾಲಯದವರಿಗೆ ಭಾವಚಿತ್ರವನ್ನು ಕುಂಭೋತ್ಸವದೊಂದಿಗೆ ಮೆರವಣಿಗೆ ನೆರವೇರಿಸಲಾಯಿತು.
ದೇವಾಲಯ ಪ್ರಧಾನ ಅರ್ಚಕ ದಿಗಂಬರ್‌ಭಟ್ ಜೋಶಿ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಸಾಮೂಹಿಕ ಸಂಕಲ್ಪ, ಸಾಮೂಹಿಕ ಪಾರಾಯಣ, ಭಜನೆ, ತೊಟ್ಟಿಲು ಸೇವೆ, ಬಾಲಮುತೈದೆಯರಿಗೆ ಪೂಜೆ, ಮಹಾಮಂಗಳಾರತಿ, ಉಡಿ ತುಂಬುವ ಶಾಸ ಮತ್ತು ಸಾಮೂಹಿಕ ಪ್ರಸಾದ ವಿತರಣೆ ನಡೆಯಿತು.
ಸಮಾಜದ ತಾಲೂಕು ಘಟಕದ ಅಧ್ಯಕ್ಷೆ ರೂಪಾರಾಣಿ ರಾಯಚೂರ್ ಮಾತನಾಡಿ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳ ಜತೆಗೆ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 25ಯೂನಿಟ್ ರಕ್ತ ಸಂಗ್ರಹಿಸಲಾಗಿದೆ ಎಂದರು. ಬೆಂಗಳೂರು ನೆಲದವ್ವ ಕಲಾಕೇಂದ್ರದಿಂದ ನವಶಕ್ತಿ ವೈಭವ ನೃತ್ಯ ಪ್ರದರ್ಶನ, ಆರ್ಯ ವೈಶ್ಯ ಸಮಾಜದ ಸಮೂಹ ಬಳಗದಿಂದ ಸ್ವರಪಾನ, ಆರ್ಟ್ ಆ್ ಲಿವಿಂಗ್ ಬೆಂಗಳೂರು ಘಟಕದಿಂದ ಭಜನೆ ಮತ್ತು ಗಾಂಧಿ ವೃತ್ತದಲ್ಲಿ ವಾಸವಿ ಮಹಾ ಆರತಿ ಕಾರ್ಯಕ್ರಮ ಜರುಗಿತು.
ಸಮಾಜದ ಪ್ರಧಾನ ಕಾರ್ಯದರ್ಶಿ ಈಶ್ವರ ಶ್ರೇಷ್ಠಿ, ಉಪಾಧ್ಯಕ್ಷ ಸುರೇಶ ಶ್ರೇಷ್ಠಿ, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಭಾಗ್ಯಈಶ್ವರ ಶ್ರೇಷ್ಠಿ, ವಿವಿಧ ಘಟಕಗಳ ಪದಾಧಿಕಾರಿಗಳಾದ ಮಾರುತಿ ಪ್ರಸಾದ ಶ್ರೇಷ್ಠಿ, ಭಂಡಾರಿ ವಾಸುದೇವ ಶ್ರೇಷ್ಠಿ, ಪ್ರಸಾದ ಪಾನಗಂಟಿ, ಮಂಜುನಾಥ ಇಲ್ಲೂರು, ವೀರೇಶ ಇಲ್ಲೂರು ಇತರರಿದ್ದರು.
ಬಸಾಪಟ್ಟಣ: ತಾಲೂಕಿನ ಬಸಾಪಟ್ಟಣದಲ್ಲಿ ಆರ್ಯವೈಶ್ಯ ಯುವಜನ ಸಂಘ ಮತ್ತು ವಾಸವಿ ಮಹಿಳಾ ಮಂಡಳಿಯಿಂದ ಶ್ರೀ ಕನ್ಯಕಾಪರಮೇಶ್ವರಿ ಜಯಂತ್ಯುತ್ಸವ ಅಚರಿಸಲಾಯಿತು. ಗ್ರಾಮದ ಆಂಜನೇಯಸ್ವಾಮಿ ದೇವಾಲಯದಿಂದ ವಾಸವಿ ಮಂಗಲ ಭವನದವರೆಗೆ ಪೂರ್ಣಕುಂಭದೊಂದಿಗೆ ಭಾವಚಿತ್ರದ ಮೆರವಣಿಗೆ ನೆರವೇರಿಸಲಾಯಿತು. ನಂತರ ಮೂರ್ತಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ತೊಟ್ಟಿಲು ಸೇವೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು. ಈ ಸಂದರ್ಭದಲ್ಲಿ ವಾಸವಿ ಮಂಗಲ ಭವನಕ್ಕೆ ಹೋಗುವ ಮಾರ್ಗ ಸೂಚಿ ನಾಮಲಕ ಅನಾವರಣಗೊಳಿಸಲಾಯಿತು.
ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್, ಸಮಾಜದ ಪ್ರಮುಖರಾದ ಸತ್ಯನಾರಾಯಣ ಶ್ರೇಷ್ಠಿ, ಸುರೇಬಾನ್, ಸಂತೋಷ ಕುಮಾರ, ಹನುಮೇಶ ಶ್ರೇಷ್ಠಿ, ಕೆ. ಬಾಲಗುರು ಶ್ರೇಷ್ಠಿ, ಇಂದರಗಿ ಯಲ್ಲಯ್ಯ, ನಾಗರಾಜ, ವಿಶ್ವನಾಥ, ಶ್ರೀನಿವಾಸ್, ಶಾಮ್ ಸುಂದರ, ಗವಿಸಿದ್ದೇಶ, ಗಣೇಶ, ನಿರಂಜನ, ಮಹಿಳಾ ಮಂಡಳಿ ಪದಾಧಿಕಾರಿಗಳಾದ ಸವಿತಾ ಸುರೇಬಾನ್, ಉಷಾ, ಸುಲಕ್ಷಣಾ, ಸಾಕ್ಷಿ, ವೆಂಕಟಲಕ್ಷ್ಮೀ ಸಾಯಿಪ್ರಿಯಾ, ಗೀತಾ, ರಂಜಿತಾ, ಸುಧಾಬಾಯಿ, ಲಕ್ಷ್ಮೀ, ಹರ್ಷಿತಾ, ರತ್ನಾಮಾಲಾ, ಯಂಕಮ್ಮ, ರಾಜೇಶ್ವರಿ, ಪ್ರಭಾವತಿ, ನಾಗರತ್ನಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net