ಸಮಾಜ ಮುಖಿ ಕಾರ್ಯಕ್ಕೆ ಆದ್ಯತೆ

ಗಂಗಾವತಿ ಶಾರದಾ ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿ ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳ 76ನೇ ವರ್ಧಂತ್ಯುತ್ಸವ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ, ಪ್ರಮುಖರಾದ ರಾಘವೇಂದ್ರ ಅಳವಂಡಿಕರ್, ಬಾಲಕಷ್ಣ ದೇಸಾಯಿ, ಭೀಮಶಂಕರ್ ಹೊಸಳಿ, ಶ್ರೀದೇವಿ ಪುರಾಣಿ, ವಿದ್ಯಾವತಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಭಾರತೀ ತೀರ್ಥ ಸ್ವಾಮೀಜಿ
  • ವರ್ಧಂತ್ಯುತ್ಸವ
  • ಪೀಠದ
ಗಂಗಾವತಿ: ನಗರದ ಶಾರದಾ ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿ ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳ 76ನೇ ವರ್ಧಂತ್ಯುತ್ಸವ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದಲ್ಲಿ ಪರಿವಾರದ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಪಾರಾಯಣ ಮತ್ತು ಮಹಿಳಾ ಭಜನಾ ಮಂಡಳಿಯಿಂದ ನಿರಂತರ ಭಜನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.
ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಪ್ರಥಮ ಪೀಠವಾದ ರಾಜ್ಯದ ಶಂಗೇರಿ ಶಾರದಾ ಪೀಠವು ಧಾರ್ಮಿಕ ಆಚರಣೆಯೊಂದಿಗೆ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನಗರದಲ್ಲಿ ಶ್ರೀಮಠದಿಂದ ಶಾರದಾಂಬೆ ದೇವಾಲಯ ನಿರ್ಮಿಸಿದ್ದು, ಆರೋಗ್ಯ, ರಕ್ತದಾನ ಮತ್ತು ನೇತ್ರ ತಪಾಸಣೆ ಉಚಿತ ಶಿಬಿರ ಏರ್ಪಡಿಸಲಾಗಿದೆ.
ಬಡ ಕುಟುಂಬದ ಮದುವೆಗಾಗಿ ಮಾಂಗಲ್ಯ ವಿತರಣೆ, ಉನ್ನತ ಪರೀಕ್ಷೆಗೆ ತರಬೇತಿ ಕಾರ್ಯಾಗಾರ, ಅಕ್ಷರ ಅಭ್ಯಾಸ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಪ್ರಮುಖರಾದ ವೇಣುಗೋಪಾಲ್, ಮೋಹನ್ ಲೆಕ್ಕಿಹಾಳ, ರಮೇಶ್ ಅಳವಂಡಿ, ಅನಿಲ್ ಅಳವಂಡಿ, ಅಪ್ಪಣ್ಣ ದೇಶಪಾಂಡೆ, ಪವನ್ ಜೋಶಿ, ಶ್ರೀದೇವಿ ಪುರಾಣಿಕ, ವಿದ್ಯಾವತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net