ತಾವರಗೇರಾ ಸಮೀಪದ ಕಿಲಾರಹಟ್ಟಿಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ದಿಶಾ ಸಮಿತಿ ಸದಸ್ಯ ದೊಡ್ಡ ಬಸನಗೌಡ ಪಾಟೀಲ ಬಯ್ಯಪೂರ, ಜಿಪಂ ಮಾಜಿ ಸದಸ್ಯ ಹನಮಗೌಡ ಪಾಟೀಲ, ಮಾಲತಿ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಪಾಟೀಲ, ಪ್ರಮುಖರಾದ ಭೀಮರಾವ್ ಕುಲಕರ್ಣಿ, ಮಹಾಂತೇಶ, ಸದಸ್ಯರಾದ ಗ್ಯಾನಪ್ಪ, ಭೀಮಣ್ಣ ಬೇವಿನಾಳ ಇತರರಿದ್ದರು.
ತಾವರಗೇರಾ: ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ತಾಲೂಕುಗಳ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಒದಗಿಸಿ ಗ್ರಾಮೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ರಾಜಶೇಖರ್ ಹಿಟ್ನಾಳ್ ಹೇಳಿದರು.
ಸಮೀಪದ ಕಿಲ್ಲಾರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಆದರ್ಶ ಗ್ರಾಮಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಗ್ರಾಮಗಳ ಬದಲಾವಣೆ ಮಾಡಲಾಗುವುದು ಎಂದರು.
ದಿಶಾ ಸಮಿತಿ ಸದಸ್ಯ ದೊಡ್ಡಬಸನಗೌಡ ಪಾಟೀಲ ಬಯ್ಯಪೂರ, ಜಿಪಂ ಮಾಜಿ ಸದಸ್ಯ ಹನಮಗೌಡ ಪಾಟೀಲ, ಮಾಲತಿ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಪಾಟೀಲ, ಪ್ರಮುಖರಾದ ಭೀಮರಾವ್ ಕುಲಕರ್ಣಿ, ಮಹಾಂತೇಶ, ಸದಸ್ಯರಾದ ಗ್ಯಾನಪ್ಪ, ಭೀಮಣ್ಣ ಬೇವಿನಾಳ ಇತರರಿದ್ದರು.