ಮಣ್ಣು ಅಕ್ರಮ ಸಾಗಣೆ ತಡೆಯಿರಿ

ತುಂಗಭದ್ರಾ ಡ್ಯಾಂ ಹಿನ್ನೀರಿನಲ್ಲಿ ನಡೆಯುತ್ತಿರುವ ಲವತ್ತಾದ ಮಣ್ಣು ಅಕ್ರಮ ಸಾಗಣೆ ನಿಯಂತ್ರಿಸಲು ಒತ್ತಾಯಿಸಿ ಭಾರತೀಯ ಪ್ರಜಾ ಸೇನೆ ಕಾರ್ಯಕರ್ತರು ಗಂಗಾವತಿಯಲ್ಲಿ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್‌ಗೆ ಮನವಿ ಸಲ್ಲಿಸಿದರು. ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ನಬೀ ರಸೂಲ್, ಪದಾಧಿಕಾರಿಗಳಾದ ಆರ್ೀ, ಮುಸ್ತಫಾ, ಸಮೀರ್ ಇತರರಿದ್ದರು.
ತುಂಗಭದ್ರಾ ಡ್ಯಾಂ ಹಿನ್ನೀರಿನಲ್ಲಿ ನಡೆಯುತ್ತಿರುವ ಲವತ್ತಾದ ಮಣ್ಣು ಅಕ್ರಮ ಸಾಗಣೆ ನಿಯಂತ್ರಿಸಲು ಒತ್ತಾಯಿಸಿ ಭಾರತೀಯ ಪ್ರಜಾ ಸೇನೆ ಕಾರ್ಯಕರ್ತರು ಗಂಗಾವತಿಯಲ್ಲಿ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್‌ಗೆ ಮನವಿ ಸಲ್ಲಿಸಿದರು. ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ನಬೀ ರಸೂಲ್, ಪದಾಧಿಕಾರಿಗಳಾದ ಆರ್ೀ, ಮುಸ್ತಫಾ, ಸಮೀರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಪ್ರಜಾಸೇನೆ ಒತ್ತಾಯ
  • ಗಂಗಾವತಿ ಡಿವೈಎಸ್ಪಿಗೆ ಮನವಿ
ಗಂಗಾವತಿ: ಮುನಿರಾಬಾದ್ ವ್ಯಾಪ್ತಿಯ ತುಂಗಭದ್ರಾ ಡ್ಯಾಂ ಹಿನ್ನೀರಿನಲ್ಲಿ ಲವತ್ತಾದ ಮಣ್ಣು ಅಕ್ರಮ ಸಾಗಣೆ ಮಾಡುತ್ತಿದ್ದು, ಇದನ್ನು ನಿಯಂತ್ರಿಸಲು ಒತ್ತಾಯಿಸಿ ಭಾರತೀಯ ಪ್ರಜಾಸೇನೆ ಕಾರ್ಯಕರ್ತರು ನಗರದ ಡಿವೈಎಸ್ಪಿ ಕಚೇರಿಯಲ್ಲಿ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್‌ಗೆ ಮನವಿ ಸಲ್ಲಿಸಿದರು.
ಅಲ್ಪಸಂಖ್ಯಾತ ಘಟಕದ ಸದಸ್ಯರೊಂದಿಗೆ ಡಿವೈಎಸ್ಪಿ ಭೇಟಿಯಾದ ಕಾರ್ಯಕರ್ತರು, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಟಿಪ್ಪರ್‌ಗಳ ಓಡಾಟದ ಬಗ್ಗೆ ಚರ್ಚಿಸಿದರು. ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ನಬಿ ರಸೂಲ್ ಮಾತನಾಡಿ, ತುಂಗಾಭದ್ರಾ ನದಿ ತೀರದಲ್ಲಿ ಬರುವ ಬೂದಿಹಾಳ, ಬೆಳ್ಳೂರು, ಡಂಬರಳ್ಳಿ, ಗೊಂಡಬಾಳ, ಹಿರೇಸಿಂದೋಗಿ, ಮರಿಯಮ್ಮನಹಳ್ಳಿ, ವರದಾಪುರ, ಹೊಸಳ್ಳಿ, ಕಾಸನಕಂಡಿ, ಕಾತರಕಿ, ಗೂಡ್ಲಾನೂರು, ಮೆಳ್ಳಿಕೇರಿ, ಹ್ಯಾಟಿ ಹಿನ್ನೀರು ಪ್ರದೇಶದಲ್ಲಿ ಲವತ್ತಾದ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಕೊಪ್ಪಳ ಮತ್ತು ಗಂಗಾವತಿ ತಾಲೂಕಿನ ಇಟ್ಟಿಗೆ ಭಟ್ಟಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಲವತ್ತಾದ ಮಣ್ಣನ್ನು ರೈತರ ಭೂಮಿಗಳಿಗೆ ನೀಡುವ ಬಗ್ಗೆ ಕಾಯ್ದೆಯಿದ್ದು, ಉಚಿತವಾಗಿ ಪೂರೈಸಬೇಕು. ಟಿಪ್ಪರ್‌ಗಳ ಮೂಲಕ ಲವತ್ತಾದ ಮಣ್ಣು ಮಾರಾಟ ಜಾಲ ಸೃಷ್ಟಿಯಾಗಿದ್ದು, ಸರ್ಕಾರ ಮತ್ತು ರೈತರಿಗೆ ವಂಚಿಸಲಾಗುತ್ತಿದೆ. ಟಿಪ್ಪರ್‌ಗಳ ಓಡಾಟದಿಂದ ರಸ್ತೆ ಗಳು ಹಾಳಾಗುತ್ತಿದ್ದು, ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಡ್ಯಾಂ ಭದ್ರತೆ ಮೇಲೂ ಪರಿಣಾಮ ಬೀರಲಿದ್ದು, ಜಲಸಂಪನ್ಮೂಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಗಮನಕ್ಕಿದ್ದರೂ ಕ್ರಮವಾಗಿಲ್ಲ. ಟಿಪ್ಪರ್‌ಗಳ ಓಡಾಟದ ಮೇಲೆ ಪೊಲೀಸರು ಗಮನಹರಿಸಬೇಕಿದ್ದು, ನಿಯಂತ್ರಣಕ್ಕೆ ಎಲ್ಲ ತಾಲೂಕಿನಲ್ಲಿ ಚೆಕ್‌ಪೋಸ್ಟ್ ಹಾಕಲು ಒತ್ತಾಯಿಸಿದರು. ಪದಾಧಿಕಾರಿಗಳಾದ ಆರ್ೀ, ಮುಸ್ತಫಾ, ಸಮೀರ್, ರಿಯಾಜ್, ಕೆ.ಸಮೀರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net