ಶಾಲೆ ಆರಂಭಕ್ಕೆ ಸಿದ್ಧತೆ ಕೈಗೊಳ್ಳಿ

ಅಳವಂಡಿಯ ಬಾಲಕಿಯರ ಸಹಿಪ್ರಾ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಶಾಲೆಗಳಿಗೆ ಸಿಆರ್‌ಪಿ ವಿಜಯಕುಮಾರ ಟಿಕಾರೆ ಪುಸ್ತಕಗಳನ್ನು ವಿತರಿಸಿದರು. ಶಿಕ್ಷಕರಾದ ಎಲ್. ಜಯಲಕ್ಷ್ಮೀ, ಭಾರತಿ, ರಮೇಶ ಬರದೂರ, ಶಾರದಾ, ನಾರಾಯಣ ಆಂಬೊರೆ, ರವಿನಾಯಕ ಇದ್ದರು.
ಅಳವಂಡಿಯ ಬಾಲಕಿಯರ ಸಹಿಪ್ರಾ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಶಾಲೆಗಳಿಗೆ ಸಿಆರ್‌ಪಿ ವಿಜಯಕುಮಾರ ಟಿಕಾರೆ ಪುಸ್ತಕಗಳನ್ನು ವಿತರಿಸಿದರು. ಶಿಕ್ಷಕರಾದ ಎಲ್. ಜಯಲಕ್ಷ್ಮೀ, ಭಾರತಿ, ರಮೇಶ ಬರದೂರ, ಶಾರದಾ, ನಾರಾಯಣ ಆಂಬೊರೆ, ರವಿನಾಯಕ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಆರ್‌ಪಿ ವಿಜಯಕುಮಾರ ಟಿಕಾರೆ ಹೇಳಿಕೆ
  • ಪುಸ್ತಕಗ ವಿತರಣೆ
ಅಳವಂಡಿ: ಪ್ರಸಕ್ತ ವರ್ಷದ ಶಾಲೆಯ ಆರಂಭಕ್ಕೂ ಮುನ್ನ ಸರ್ಕಾರ ಶೇ.80ಕ್ಕೂ ಹೆಚ್ಚು ಪಠ್ಯ ಪುಸ್ತಕಗಳನ್ನು ಪೂರೈಸಿದ್ದು, ಕ್ಲಸ್ಟರ್ ವ್ಯಾಪ್ತಿಯ ಗ್ರಾಮಗಳ ಶಾಲೆಗೆ ಸಕಾಲಕ್ಕೆ ಪೂರೈಸಲಾಗುವುದು ಎಂದು ಸಿಆರ್‌ಪಿ ವಿಜಯಕುಮಾರ ಟಿಕಾರೆ ಹೇಳಿದರು.
ಗ್ರಾಮದ ಬಾಲಕಿಯರ ಸಹಿಪ್ರಾ ಶಾಲೆಯಲ್ಲಿ ಬುಧವಾರ ಕ್ಲಸ್ಟರ್ ವ್ಯಾಪ್ತಿಯ ಗ್ರಾಮಗಳ ಶಾಲೆಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಶಾಲೆ ಆರಂಭದ ನಂತರ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸುವಂತೆ ತಿಳಿಸಲಾಗಿದೆ.
ಶಾಲೆ ಆರಂಭಕ್ಕೆ ಸಕಲ ಸಿದ್ಧತೆ ಕೈಕೊಳ್ಳಬೇಕು. ಕೊರತೆಯಾಗುವ ಪುಸ್ತಕಗಳ ಬಗ್ಗೆ ವಿಷಯವಾರು ಹಾಗೂ ತರಗತಿವಾರು ಮಾಹಿತಿ ನೀಡಬೇಕು ಎಂದರು. ಶಿಕ್ಷಕರಾದ ಎಲ್.ಜಯಲಕ್ಷ್ಮೀ, ಭಾರತಿ, ರಮೇಶ ಬರದೂರ, ಶಾರದಾ, ನಾರಾಯಣ ಆಂಬೊರೆ. ರವಿನಾಯಕ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net