ತ್ರಿವಿಧ ದಾಸೋಹದ ಮೂಲಕ ನಾಡಿನಾದ್ಯಂತ ಹೆಸರಾದ ಗವಿಮಠ ಜಾತ್ರೆ ಸಡಗರ ಎಲ್ಲೆಡೆ ಮನೆ ಮಾಡಿದೆ. ಭಕ್ತರು ಮಠಕ್ಕೆ ದವಸ&ಧಾನ್ಯ ಅರ್ಪಿಸುತ್ತಿದ್ದಾರೆ. ಜಾತ್ರಾ ಆವರಣ, ಮಠದಂಗಳ, ದಾಸೋಹ ಭವನ, ಜಾತ್ರಾ ಆವರಣ, ವಸತಿ, ಕೈಲಾಸ ಮಂಟಪ, ಗಣ್ಯರ ವೇದಿಕೆ ಎಲ್ಲವನ್ನೂ ಸಿದ್ಧಪಡಿಸಲಾಗುತ್ತಿದೆ. ದೀಪಾಲಂಕಾರವು ನಡೆಯುತ್ತಿದ್ದು ದೀಪಗಳ ಬೆಳಕಿನಲ್ಲಿ ಗವಿಮಠದಂಗಳ ಪ್ರಜ್ವಲಿಸಲಿದೆ. ಮುಖ್ಯವಾಗಿ ಮಹಾದಾಸೋಹ ಹೆಸರಾಗಿದ್ದು, ಬೃಹತ್ ದಾಸೋಹ ಭವನ ತಲೆ ಎತ್ತುತ್ತಿದೆ. ಭಕ್ತರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ 76 ಕೌಂಟರ್ ನಿರ್ಮಿಸಲಾಗುತ್ತಿದೆ. 36 ಸಿಹಿಪದಾರ್ಥ, ರೊಟ್ಟಿ, ಪಲ್ಯಕ್ಕೆ ಸೀಮಿತವಾದರೆ, ಬಾಕಿ 40 ಅನ್ನ&ಸಾಂಬಾರ್ ಕೌಂಟ್ಗಳಾಗಿವೆ.